ಜಾಲ್ಸೂರು ಪಯಸ್ಸಿನಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಮತ್ತು ಧತ್ತಿ ನಿಧಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
















ಧ್ವಜಾರೋಹಣವನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಜಾಕೆ ಸದಾನಂದ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ರಾಮಚಂದ್ರ ಕೆ.ಬಿ, ಜತೆ ಕಾರ್ಯದರ್ಶಿ ಜಯರಾಮ ರೈ, ನಿರ್ದೇಶಕರಾದ ಗಂಗಾಧರ ಕಾಳಮನೆ, ನಾರಾಯಣ ಗೌಡ ಬೊಮ್ಮೆಟ್ಟಿ, ಮುಖ್ಯಶಿಕ್ಷಕಿ ಜಯಲತಾ ಕೆ.ಆರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷೆ ಪುಷ್ಪಾವತಿ, ಸದಸ್ಯರು, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಇದ್ದರು. ಬಳಿಕ ಧತ್ತಿನಿಧಿ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಅಧ್ಯಕ್ಷತೆಯನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಜಾಕೆ ಸದಾನಂದ ವಹಿಸಿದ್ದರು. ಈ ಸಂದರ್ಭದಲ್ಲಿ ಕೇಪು ಸುಂದರ ಮಾಸ್ತರ್ ನೀಡುವ ಧತ್ತಿ ನಿಧಿಯನ್ನು ವಿತರಿಸಲಾಯಿತು. ಎಸ್.ಎಸ್.ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕೌಶಿಕ್ ಕೆ ನಾಯ್ಕ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಎಜ್ಯುಕೇಶನ್ ಸೊಸೈಟಿ ಜತೆ ಕಾರ್ಯದರ್ಶಿ ಜಯರಾಮ ರೈ, ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಶೇಖರ, ಮುಖ್ಯಶಿಕ್ಷಕಿ ಜಯಲತಾ ಕೆ.ಆರ್ ಇದ್ದರು. ಶಿಕ್ಷಕರಾದ ಕುಮಾರ್ ಲಮಾಣಿ, ಮೀನಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ ಕೆ., ಸಿಬ್ಬಂದಿ ಬೇಬಿ ಕೆ ಕಾರ್ಯಕ್ರಮಕ್ಕೆ ಸಹಕರಿಸಿದರು. ಶಿಕ್ಷಕಿ ಸವಿತಾ ಕುಮಾರಿ ವಂದಿಸಿ, ಶಿಕ್ಷಕ ಶಿವಪ್ರಕಾಶ ಕೆ. ನಿರೂಪಿಸಿದರು.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜಾಲ್ಸೂರು ಪೇಟೆಯಲ್ಲಿ ಮೆರವಣಿಗೆ ನಡೆಯಿತು. ಇದೇ ವೇಳೆ ಶಾಲಾ ಎಸ್. ಡಿ.ಎಂ.ಸಿ , ಗ್ರಾ.ಪಂ. ಜಾಲ್ಸೂರು, ರಿಕ್ಷ ಚಾಲಕ ಮಾಲಕರು, ಪಿಕ್ಕಪ್ ಚಾಲಕ ಮಾಲಕರು ಸಿಹಿ ತಿಂಡಿ ವಿತರಿಸಿದರು.











