ದ. ಕ ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು. ಗ್ರಾಂ.ಪಂ ಅಧ್ಯಕ್ಷರಾದ ಸುಮತಿ ಶಕ್ತಿ ವೇಲು ಸೇಜಾರೋಹಣವನ್ನು ನೆರವೇರಿಸಿದರು.















ಈ ಸಂದರ್ಭದಲ್ಲಿ ಗ್ರಾಮ.ಪಂ ಉಪಾಧ್ಯಕ್ಷ ಎಸ್. ಕೆ ಹನೀಫ್ , ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಂ ಶಹೀದ್ , ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಸೋಮ ಶೇಖರ್ ಕೊಯಿಂಗಾಜೆ , ಕೆ. ಪಿ ಜಾನಿ , ಗ್ರಾಮ. ಪಂ ಅಭಿವೃದ್ಧಿ ಅಧಿಕಾರಿ ಸರಿತಾ ವೋಲ್ಗಾ ಡಿಜೋಜ , ಗಣಪತಿ ಭಟ್ , ರಾಜ ಗೋಪಾಲ್ ಉಳುವಾರು, ನಾಗೇಶ್ ಪೇರಾಲು, ಪ್ರಮೀಳಾ ಪೆಲ್ತಡ್ಕ , ಕಾಂತಿ ಬಿ. ಎಸ್ ಗ್ರಾಂ.ಪಂ ಸದಸ್ಯರಾದ ಸುಂದರಿ ಮುಂಡಡ್ಕ , ವಿಮಲಾ ಪ್ರಸಾದ್ , ಯಮುನಾ, ಸುಶೀಲಾ , ಜಗದೀಶ್ ರೈ, ಅನುಪಮಾ , ರಜನಿ ಶರತ್ ಬಿ. ಎಂ.ಎಸ್ ಆಟೋ ಚಾಲಕ ಸಂಘದ ಅಧ್ಯಕ್ಷ ಕೇಶವ ಬಂಗ್ಲೆಗುಡ್ಡೆ , ಸಂಜೀವಿನಿ ಒಕ್ಕೂಟ ಸದಸ್ಯರು, ಗ್ರಾಂ.ಪಂ ಸಿಬ್ಬಂದಿ ವರ್ಗ , ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಸಿಹಿ ತಿಂಡಿ ವಿತರಣೆ ನಡೆಯಿತು.ಗ್ರಾಂ.ಪಂ ಉಪಾಧ್ಯಕ್ಷ ಎಸ್.ಕೆ ಹನೀಫ್ ಸರ್ವರನ್ನು ಸ್ವಾಗತಿಸಿ , ಮಾಜಿ ಗ್ರಾಂ.ಪಂ ಅಧ್ಯಕ್ಷ ಜಿ.ಕೆ ಹಮೀದ್ ವಂದಿಸಿದರು










