ಪಂಜದಲ್ಲಿ ಅಖಂಡ ಭಾರತ ಸಂಕಲ್ಪ ದಿನ:ಬೃಹತ್ ಪಂಜಿನ ಮೆರವಣಿಗೆ

0

ಪಂಜ ಸಿ ಎ ಬ್ಯಾಂಕ್ ಬಳಿ ತನಕ ಬೃಹತ್ ಮೆರವಣಿಗೆ

ಹಿಂದು ಜಾಗರಣ ವೇದಿಕೆ ಪಂಜ, ಸುಳ್ಯ ತಾಲೂಕು,ಪುತ್ತೂರು ಜಿಲ್ಲೆ
ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜದಲ್ಲಿ ಆ.14 ರಂದು ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

ಪಂಜ ದೀನ್ ದಯಾಳ್ ವಾಣಿಜ್ಯ ಸಂಕೀರ್ಣದ ಬಳಿ ಬೃಹತ್ ಪಂಜಿನ ಮೆರವಣಿಗೆಯನ್ನು ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು ಮತ್ತು ದೇವಿಪ್ರಸಾದ್ ಜಾಕೆ ಚಾಲನೆ ನೀಡಿದರು.
ಬಳಿಕ ಹಳೆ ಬಸ್ ನಿಲ್ದಾಣದಿಂದ ಸಿ ಎ ಬ್ಯಾಂಕ್ ಬಳಿ ತನಕ ಮೆರವಣಿಗೆ ಸಾಗಿ ಬಂದು ಸಮಾರೋಪ ನಡೆಯಿತು .

ಕಾರ್ಯಕ್ರಮದಲ್ಲಿ ಪೂರ್ಣಾತ್ಮರಾಮ ಈಶ್ವರಮಂಗಳ ದಿಕ್ಸೂಚಿ ಭಾಷಣ ಮಾಡಿ” ಅಂದಿನ ದಿನಗಳಲ್ಲಿಯೇ ಭಾರತದಲ್ಲಿ ಹೃದಯ ಶ್ರೀಮಂತಿಕೆ ಇತ್ತು. ಭಾರತ ದಾನ ಧರ್ಮ ಕೊಟ್ಟದರ ಫಲ ಅಖಂಡ ಭಾರತ ಆಗ ಬೇಕಾಗಿದ್ದು ತ್ರಿಖಂಡ ಭಾರತ ವಾಯಿತು.


ಈ ದೇಶದ ಸೈನಿಕರ, ಪೋಲೀಸರ ಮೇಲೆ ದಾಳಿ ಮಾಡುವ ಉಗ್ರರಿಗೆ ಗುಂಡೇ ಮದ್ದು. ಪ್ರವಾಹದಲ್ಲಿ ಸಿಲುಕಿದವರಿಗೆ ಆಹಾರ ಪೊಟ್ಟಣ್ಣ ನೀಡಿ ಹಿಂದುರಿಗುತ್ತಿದ್ದ ನಮ್ಮ ಸೈನಿಕರಿಗೆ , ಪೋಲಿಸರಿಗೆ ಕಲ್ಲು ಎಸೆದ ಘಟನೆ ಕೂಡ ಈ ಹಿಂದೆ ನಡೆದಿದೆ. ಕೆಲವು ಮಕ್ಕಳಿಗೆ ಅಂತದೇ ಶಿಕ್ಷಣ ಸಿಗುವುದರಿಂದ ಈ ರೀತಿ ಆಗುತ್ತಿದೆ. ದೇಶದ ಹೊರಗಿನ ಶತ್ರುಗಳ ಜೊತೆಗೆ ದೇಶದ ಒಳಗಿನ ಹಿತ ಶತ್ರುಗಳ ಬಗ್ಗೆ ನಮ್ಮ ಗಮನ ಬೇಕು. ನಾವೆಲ್ಲರೂ ಒಂದಾಗಿ ದೇಶದ ರಕ್ಷಣೆಯಲ್ಲಿ ಪಾಲ್ಗೊಳ್ಳುವ.”ಎಂದು ಅವರು ಹೇಳಿದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಸಭಾಧ್ಯಕ್ಷತೆ ವಹಿಸಿದ್ದರು.


ಹಿಂದು ಜಾಗರಣ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅನೂಪ್ ಕುಮಾರ್ ಆಳ್ವ , ಹಿಂದೂ ಜಾಗರಣ ವೇದಿಕೆಯ ಪಂಜ ವಲಯ ಅಧ್ಯಕ್ಷ ದಯಾನಂದ ಮೇಲ್ಮನೆ,
ನಿವೃತ್ತ ಯೋಧ ಬೇಬಿ ತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುದರ್ಶನ ಪಟ್ಟಾಜೆ ಪ್ರಾರ್ಥಿಸಿದರು. ಸತೀಶ್ ಪಲ್ಲೋಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ಲೋಕೇಶ್ ಬರೆಮೇಲು ಸ್ವಾಗತಿಸಿದರು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದಯಾನಂದ ಅಂಬುಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕಿ ಕು.ಭಾಗೀರಥಿ ಮುರುಳ್ಯ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಜಯರಾಮ ಕಲ್ಲಾಜೆ ನಿರೂಪಿಸಿದರು. ಶರತ್ ಕುದ್ವ ವಂದಿಸಿದರು.