ಮೊಗರ್ಪಣೆ: ಮಸ್ಜಿದ್ ನಲ್ಲಿ ಎಚ್ ಐ ಜೆ ಕಮಿಟಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ನೂರುಲ್ ಇಸ್ಲಾಂ ಮದ್ರಸಾ ವಿದ್ಯಾರ್ಥಿಗಳು, ಪೋಷಕರು ಭಾಗಿ

ಮೊಗರ್ಪಣೆ ಮಸ್ಜಿದ್ ಹಾಗೂ ನೂರುಲ್ ಇಸ್ಲಾಂ ಮದ್ರಸ ವತಿಯಿಂದ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆ.15 ರಂದು ಆಚರಿಸಲಾಯಿತು.

ಎಚ್ ಐ ಜೆ ಕಮಿಟಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸೀ ಫುಡ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸಾ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ ಯವರು ಸ್ವಾತಂತ್ರ್ಯೋತ್ಸವದ ಸಂದೇಶ ಸಾರಿದರು.
ಮಸೀದಿ ಸಹಾಯಕ ಖತೀ ಬರಾದ ಫಾಯಿಝ್ ಜೊಹರಿ ರವರು ದುವಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಸಿ ಎಂ ಉಸ್ಮಾನ್, ಕೋಶಾಧಿಕಾರಿ ಮಹಮ್ಮದ್ ಆದರ್ಶ, ಕಾರ್ಯದರ್ಶಿ ಅಬ್ದುಲ್ ರೈಮಾನ್ ಎಸ್ ವೈ, ಎಸ್ ಸಂಶುದ್ದೀನ್ ಅರಂಬೂರು ಹಾಗೂ ಸದಸ್ಯರುಗಳು ಮದ್ರಸಾ ವಿದ್ಯಾರ್ಥಿಗಳು,ಮುಅಲ್ಲಿಂ ವೃಂದದವರು, ಪೋಷಕರುಗಳು ಭಾಗವಹಿಸಿದ್ದರು.

ಅಬ್ದುಲ್ ಕರೀಂ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.