














ಶ್ರೀರಾಮ ಶಿಶುಮಂದಿರ ವಿಕಾಸಪುರ ಎಡೋಣಿ ಬಳ್ಪದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆ.15 ರಂದು ಆಚರಿಸಲಾಯಿತು. ಈ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಆಗಿರುವ ಕಾರ್ಯಪ್ಪ ಗೌಡ ಚಿದ್ಗಲ್ ಇವರು ನೆರವೇರಿಸಿದರು, ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಗ್ರಾಮ ವಿಕಾಸ ಪ್ರತಿಷ್ಠಾನ ಅಧ್ಯಕ್ಷ ವಿನೋದ್ ಬೊಳ್ಮಲೆ ವಹಿಸಿದ್ದರು, ವೇದಿಕೆಯಲ್ಲಿ ಶ್ರೀರಾಮ ಶಿಶುಮಂದಿರ ಪೋಷಕರ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಶ್ರೀರಾಮ ಮಾತೃ ಮಂಡಳಿ ಅಧ್ಯಕ್ಷೆ ಆಶಾ ನಾದೂರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 2ವರ್ಷದಿಂದ ರಜಾ ದಿನದಲ್ಲಿ ನಿರಂತರ ಬಾಲಗೋಕುಲ ಸಂಗೀತ ಶಿಕ್ಷಣ ನೀಡುತ್ತಿರುವ ವಿದ್ಯಾ ಭಟ್ ಇವರನ್ನು ಗೌರವಿಸಲಾಯಿತು. ತಾರಾ ಬಿ ರೈ ನಿರೂಪಿಸಿದರು, ವೇದಾವತಿ ಮಾತಾಜಿ ಸ್ವಾಗತಿಸಿದರು, ಉಷಾ ಮಾತಾಜಿ ವಂದಿಸಿದರು. ನಂತರ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು ವಿಜೇತರಿಗೆ ಬಹುಮಾನ ವಿತರಿಸಲಾಯಿತು.










