ಪೈಚಾರ್ : ಬದ್ರಿಯ ಜುಮ್ಮಾ ಮಸ್ಜಿದ್ & ಖುವ್ವತ್ತುಲ್ ಇಸ್ಲಾಂ ಮದರಸದಲ್ಲಿ 79ನೇ ಸ್ವಾತಂತ್ರ‍್ಯ ದಿನಾಚರಣೆ

0

ಮುಂಜಾನೆಯಿಂದ ಕೇಸರಿ, ಬಿಳಿ, ಹಸಿರು ತೋರಣಗಳಿಂದ ಕಂಗೋಳಿಸುತ್ತಿರುವ ಪೈಚಾರ್ ಜಂಕ್ಷನ್

ಬದ್ರಿಯ ಜುಮ್ಮಾ ಮಸ್ಜಿದ್ ಪೈಚಾರ್ ಹಾಗೂ ಖುವ್ವತ್ತುಲ್ ಇಸ್ಲಾಂ ಮದರಸ ಪೈಚಾರ್ ಇದರ ವತಿಯಿಂದ ೭೯ನೇ ಸ್ವಾತಂತ್ರ‍್ಯೊತ್ಸವ
ಕಾರ್ಯಕ್ರಮವು ಪೈಚಾರ್ ಮದರ ವಠಾರದಲ್ಲಿ ಅಗಸ್ಟ್ 15ರಂದು ನಡೆಯಿತು.

ಬದ್ರಿಯ ಜುಮ್ಮಾ ಮಸ್ಜಿದ್ ಖತಿಬಾರದ ಶಮೀರ್ ಅಹ್ಮದ್‌ನ ಈಮಿಯವರು ಪ್ರಾರ್ಥನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಖುವ್ವತ್ತುಲ್ ಇಸ್ಲಾಂ ಮದರಸದ ಸದರ್ ಮುಹಲ್ಲಿಮ್ ಫೈಝಲ್ ಸಖಾಫಿ ಸ್ವಾಗತ ಭಾಷಣ ಮಾಡಿದರು. ಧ್ವಜಾರೋಹಣವನ್ನು ಜಮಾಹತ್ ಅಧ್ಯಕ್ಷ ಹಾಜಿ ಇಬ್ರಾಹಿಂ ಪಿ ನೆರವೇರಿಸಿದರು. ನಂತರ ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆದ ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.


ಮುಖ್ಯ ಅತಿಥಿಗಳಾಗಿ ಜಮಾಹತ್ ಉಪಾಧ್ಯಕ್ಷರಾದ ಇಬ್ರಾಹಿಂ ಎಸ್ ಎ, ಜಮಾಹತ್ ಕಾರ್ಯದರ್ಶಿ ಹನೀಫ್ ಪಿಕೆ, ಮುಹಲ್ಲಿಮ್ ಗಳಾದ ಹನೀಫ್ ಮದನಿ ಮಂಡೆಕೋಲು, ಜಝೀರ್ ಸಖಾಫಿ, ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಅಧ್ಯಕ್ಷ ಅಬ್ದುಲ್ ಸತ್ತಾರ್ ಪಿಎ., ಉಪಾಧ್ಯಕ್ಷರಾದ ಹನೀಫ್ ಅಲ್ಫಾ , ಜಮಾಹತ್ ಜೊತೆ ಕಾರ್ಯದರ್ಶಿ ಅಬೂಸಾಲಿ ಕೆಪಿ., ಎಸ್ ಬಿಎಸ್ ಪೈಚಾರ್ ಅಧ್ಯಕ್ಷರಾದ ನಿಫಾಲ್ ಪೈಚಾರ್, ಬಿಜೆಎಮ್ ಇದರ ಎಲ್ಲಾ ಸದಸ್ಯರುಗಳು, ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಎಲ್ಲಾ ಸದಸ್ಯರುಗಳು ಹಾಗೂ ವಿದ್ಯಾರ್ಥಿಗಳ ಪೋಷಕರು, ಮದರಸ ವಿದ್ಯಾರ್ಥಿಗಳು, ಸ್ಥಳೀಯ ಜಮಾಹತ್ ನಿವಾಸಿಗಳು ಭಾಗವಹಿಸಿದ್ದರು. ಮದರಸ ಉಸ್ತುವಾರಿ ಮುಜೀಬ್ ಪೈಚಾರ್ ವಂದಿಸಿ , ಕಾರ್ಯಕ್ರಮವನ್ನು ನಿರೂಪಿಸಿದರು.