ಸಂಪಾಜೆ : ಸ್ಪಾಟ್ ಕಂಪ್ಯೂಟರ್ ಕಲಿಕಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸ್ಪಾಟ್ ಕಂಪ್ಯೂಟರ್ ಕಲಿಕಾ ಕೇಂದ್ರ, ಸಂಪಾಜೆ ಗ್ರಾಮ ಒನ್ ಹಾಗೂ ಕೆನರಾ ಬ್ಯಾಂಕ್ ಮತ್ತು ಚರ್ಚ್ ಬಿಲ್ಡಿಂಗ್ ನಲ್ಲಿರುವ ಸಂಸ್ಥೆಗಳ ಆಶ್ರಯದಲ್ಲಿ ಆ. ೧೫ ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಬಿ. ಶ್ರೀಧರ ಬಾಚಿಗದ್ದೆ ನೆರವೇರಿಸಿದರು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಚರ್ಚ್ ಬಿಲ್ಡಿಂಗ್‌ನಲ್ಲಿರುವ ಸಂಸ್ಥೆಗಳ ಮಾಲಕರು, ನಿರ್ದೇಶಕರು, ಸಿಬ್ಬಂದಿ ವರ್ಗ, ಕೆನರಾಬ್ಯಾಂಕಿನ ಮೆನೇಜರ್ ನಾಗೇಶ್, ಅಧಿಕಾರಿ ಮನುಲಾಲ್ ಹಾಗೂ ಕಲ್ಲುಗುಂಡಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಸಿಬ್ಬಂದಿ ಹೇಮಂತ್, ಕಲ್ಲುಗುಂಡಿ ಅಟೋ ಚಾಲಕ ಮಾಲಕ ಸಂಘದವರು ಹಾಗು ಚಾಲಕರು, ಸಂಪಾಜೆ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರು ಹಾಗೂ ಕೋಶಾಧಿಕಾರಿ ಅಲ್ಲದೆ ಸುಳ್ಯ ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್‌ನ ಶಿಕ್ಷಕಿ ಹಾಗೂ ವಿದ್ಯಾರ್ಥಿಗಳು ಹಾಗೂ ಸ್ಪಾಟ್ ಕಂಪ್ಯೂಟರ್ ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿನಿ ಕು| ರೇಶ್ಮರವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ಪಾಟ್ ಕಲಿಕಾಕೇಂದ್ರದ ನಿರ್ದೇಶಕರಾದ ಶ್ರೀ ಕಿಶೋರ್ ಕುಮಾರ್ ರವರು ಸ್ವಾಗತಿಸಿ, ಸಂಪಾಜೆ ಗ್ರಾಮ ಒನ್ ಪ್ರಾಂಚೈಸಿ ಶ್ರೀಮತಿ ಧರ್ಮಾವತಿಯವರು ವಂದಿಸಿದರು.