ಬೆಳ್ಳಾರೆ ಕೆಪಿಎಸ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಬೆಳ್ಳಾರೆ ಮುಖ್ಯ ರಸ್ತೆಯಲ್ಲಿ ಆಕರ್ಷಕ ಸ್ವಾತಂತ್ರ್ಯ ನಡಿಗೆ

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಆ15 ರಂದು 79ನೇ ಸ್ವಾತಂತ್ರ್ಯೋತ್ಸವ ಆಚರಣೆ ನಡೆಯಿತು.


ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಹರ್ಷ ಜೋಗಿಬೆಟ್ಟು ನೆರವೇರಿಸಿ ಶುಭಸಂದೇಶ ನೀಡಿದರು.ಪ್ರಾಂಶುಪಾಲ ಜನಾರ್ಧನ ಕೆ ಎನ್. ಉಪಪ್ರಾಂಶುಪಾಲರಾದ ಉಮಾಕುಮಾರಿ, ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ ಭಾಗವಹಿಸಿದ್ದರು. ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಮುರಳಿಕೃಷ್ಣ, ಶಿವಾಜಿ, ಜಮಾಲ್, ಸುಜಾತ, ಸೌಮ್ಯ ನವೀನ್ ಕುಮಾರ್ ಸಾರಕೆರೆ , ಶರತ್ ಪೂಗವನ, ಶ್ರೀನಾಥ್ ರೈ ಬಾಳಿಲ, ವಸಂತ ಪಡ್ಪು, ಪಾರ್ವತಿ, ಹೇಮಾವತಿ, ಧನ್ಯ , ನೆಸೀಮ ಪಂಜಿಗಾರು ಉಪಸ್ಥಿತರಿದ್ದರು.
ಬಳಿಕ ಬೆಳ್ಳಾರೆ ಮುಖ್ಯ ರಸ್ತೆಯಲ್ಲಿ ಸ್ವಾತಂತ್ರ್ಯ ನಡಿಗೆ ನಡೆಯಿತು.


ಸ್ಕೌಟ್ ಗೈಡ್ ,ಎನ್.ಎಸ್.ಎಸ್ ಘಟಕ , ಉಪನ್ಯಾಸಕರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸಿದರು. ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಲಡ್ಡು ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸ್ವಾತಂತ್ರ್ಯ ನಡಿಗೆಗೆ ಬೆಳ್ಳಾರೆಯ ಇಂಜಿನಿಯರ್ ಮಹಮ್ಮದ್ ಆರೀಫ್ ಹಾಗೂ ರಿಕ್ಷಾ ಚಾಲಕರು ವಿದ್ಯಾರ್ಥಿಗಳಿಗೆ ಸಿಹಿಹಂಚಿ ಸಂಭ್ರಮಿಸಿದರು.