ಮಯೂರ್ ಅಂಬೆಕಲ್ ನಿರ್ದೇಶನದ ಇನ್ ಹಿಸ್ ನೇಮ್ ಆಲ್ಬಂ ಸಾಂಗ್ ಬಿಡುಗಡೆ

0

ಫಹಲ್ಗಾಂ ಘಟನೆಯನ್ನು ನೆನಪಿಸುವ ವಿನೂತನ ಹಾಡು..

ಭಾವ ತೀರ ಯಾನ ಚಲನ ಚಿತ್ರ ನಿರ್ದೇಶನದ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿರುವ ಗಾಯಕ ಮಯೂರ್ ಅಂಬೆಕಲ್ ಮತ್ತು ಭಾವ ತೀರ ಯಾನ ಚಲನ ಚಿತ್ರದ ನಾಯಕ ನಟ ತೇಜಸ್ ಕಿರಣ್ ನಿರ್ದೇಶನದ ಇನ್ ಹಿಸ್ ನೇಮ್ ಎಂಬ ಹೃದಯ ಸ್ಪರ್ಶಿ ಆಲ್ಬಂ ಸಾಂಗ್ ಬಿಡುಗಡೆಗೊಂಡಿದೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಫಹಲ್ಗಾಂ ಉಗ್ರರ ದಾಳಿಯ ವೇಳೆ ಬಲಿಯಾದ ಹನಿಮೂನ್ ಗೆಂದು ತೆರಳಿದ ನವವಿವಾಹಿತನ ಕಥೆಯನ್ನು ಸಿನಿಮಾದ ರೀತಿಯಲ್ಲೇ ಕಟ್ಟಿಕೊಟ್ಟಿರುವ ಹಾಡು ಇದಾಗಿದ್ದು ಸ್ವಾತಂತ್ರ್ಯ ದಿನಕ್ಕೆ ಬಿಡುಗಡೆಯಾಗಿದೆ.

ಕಿರುತೆರೆಯ ನಟಿ ಚಂದನಾ ಅನಂತಕೃಷ್ಣವಹಾಗೂ ನಿದರ್ಶನ್ ಎಂಬ ಹೊಸ ಪ್ರತಿಭೆ ನಟಿಸಿರುವ ಹಾಡು ಈಗ ಎಲ್ಲರ ಗಮನ ಸೆಳೆಯುತ್ತಿದೆ.

ನೌಕಾಪಡೆಯ ಯೋಧ ಹೆಣ್ಣು ನೋಡುವ ಶಾಸ್ತ್ರದಿಂದ ಹಿಡಿದು, ಪ್ರೀತಿ ಮೂಡಿ ಮದುವೆಯಾಗುತ್ತಾರೆ, ಮದುವೆಯ ನಂತರ
ಮಧುಚಂದ್ರಕ್ಕೆ ಹೋದ ನವಜೋಡಿಯ ಮೇಲೆ ಪುಲ್ವಾಮದಲ್ಲಿ ನಡೆದ ದಾಳಿಯನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಕಟ್ಟಿಕೊಟ್ಟಿದೆ. ಈ ಹಾಡಿಗೆ ಶಿವಶಂಕರ್ ಕ್ಯಾಮೆರಾ ವರ್ಕ್ ಮಾಡಿದ್ದು ಅನುರಂಜನ್ ಸಂಕಲನ ಮಾಡಿದ್ದಾರೆ. ಒಟ್ಟು ಎರಡು ದಿನಗಳ ಕಾಲ ಈ ಹಾಡಿನ ಶೂಟಿಂಗ್ ಮಾಡಲಾಗಿದ್ದು, ಊಟಿಯಲ್ಲಿ ಪುಲ್ವಾಮಾ ಹೋಲುವ ಜಾಗದಲ್ಲಿ ಶೂಟಿಂಗ್ ಮಾಡಲಾಗಿದೆ.

ಈ ಹಾಡು ಮೊದಲೇ ಸಿದ್ಧವಾಗಿತ್ತು. ಈ ಹಾಡನ್ನು ವಿಡಿಯೋ ಮಾಡುವಾಗ ಪುಲ್ವಾಮ ಘಟನೆಯನ್ನೇ ಕಟ್ಟಿಕೊಡುವ ಐಡಿಯಾ ಬಂತು. ಅಂದುಕೊಂಡಿದ್ದಕ್ಕಿಂತ ಹೆಚ್ಚು ಹಣ ಖರ್ಚಾಗಿದೆ. ಆದರೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಈ ಹಾಡು ನೋಡಿ ತುಂಬಾ ಜನ ನಿರ್ಮಾಪಕರು ನಮಗೆ ಸಿನಿಮಾ ಮಾಡಲು ಆಫರ್ ನೀಡುತ್ತಿರುವುದು ಖುಷಿ ತಂದಿದೆ ಎನ್ನುತ್ತಾರೆ ಮಯೂರ್ ಅಂಬೆಕಲ್.