ಎಣ್ಮೂರು : ಕಲ್ಲೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ

0

ಕಲ್ಲೇರಿ ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್ ಎಣ್ಮೂರು ಮತ್ತು ಶ್ರೀ ಗೌರಿ ಮಹಿಳಾ ಮಂಡಳಿ ಕಲ್ಲೇರಿ ಇದರ ಆಶ್ರಯದಲ್ಲಿ ಆ. 15 ರಂದು 21 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಆಚರಣೆಯು ನಡೆಯಿತು. ರಾಮಣ್ಣ ಪೂಜಾರಿಯವರು ಸಮಾರಂಭವನ್ನು ಉದ್ಘಾಟಿಸಿ, ಮಾತಾಡಿದರು.


ಪ್ರಗತಿಪರ ಕೃಷಿಕ ಕುಕ್ಕಾಯಕೋಡಿ ಗಿರಿಯಪ್ಪ ಗೌಡರು ದೀಪ ಪ್ರಜ್ವಲನೆ ಮಾಡಿದರು.


ಎಣ್ಮೂರು ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಕಟ್ಟಬೀಡು ನಾಗೇಶ್ ಅಳ್ವ ಧ್ವಜಾರೋಹಣಗೈದರು, ಮುರುಳ್ಯ ಎಣ್ಮೂರು ಪ್ರಾಥಮಿಕ, ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೆಲ್ಯಾಜೆ ಚಿದಾನಂದ ರೈ, ಹಿರಿಯ ಅಥ್ಲೆಟಿಕ್ ಕ್ರೀಡಾಪಟು ಬೆಳ್ಯಪ್ಪ ಗೌಡ ಅಲೆಂಗಾರ ಮುಖ್ಯ ಅತಿಥಿಗಳಾಗಿದ್ದರು. ಶ್ರೀಮತಿ ಶೀಭಾ ರೈ ಕಾರ್ಯಕ್ರಮ ನಿರೂಪಿಸಿದರು, ಕಾರ್ತಿಕ್ ರೈ ಸ್ವಾಗತಿಸಿದರು. ದೀಪಕ್ ರೈ ವಂದಿಸಿದರು ಬಳಿಕ ಆಟೋಟ ಸ್ಪರ್ಧೆ, ಕಬಡ್ಡಿ ಪಂದ್ಯಾಟಗಳು, ನಡೆಯಿತು.