ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ಚರ್ಚಿಸಲು ಸಮಿತಿ ಗೌರವಾಧ್ಯಕ್ಷರಾದ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಜೀರ್ಣೋದ್ಧಾರ ಸಮಿತಿಯವರು ಆ. 13 ಭೇಟಿ ಮಾಡಿದರು.















ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆ ಪಂಜಿಗಾರು, ಸದಸ್ಯರಾದ ಕ್ಯಾಪ್ಟನ್ ಸುಧಾನಂದ ಮಣಿಯಾಣಿ, ಚಂದ್ರಶೇಖರ ಪನ್ನೆ, ಸುಬ್ರಹ್ಮಣ್ಯದ ಉದ್ಯಮಿ ಡಾ. ರವಿಕಕ್ಕೆಪದವು, ಸುದ್ದಿ ವರದಿಗಾರ ಈಶ್ವರ ವಾರಣಾಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










