ಮೊಗರ್ಪಣೆ ಜುಮಾ ಮಸೀದಿ ಈದ್ ಮಿಲಾದ್ ಅಂಗವಾಗಿ ಮಿಲಾದ್ ಸಮಿತಿ ರಚನೆ

0

ಅಧ್ಯಕ್ಷರಾಗಿ ಹನೀಫ್ ಜಯನಗರ ಕಾರ್ಯದರ್ಶಿ ಅಶ್ರಫ್ ಸಂಗಮ್ ಆಯ್ಕೆ

ಪೈಗಂಬರ್ ಮಹಮ್ಮದ್ ರವರ ಸಾವಿರದ ಐನೂರನೇ ಹುಟ್ಟುಹಬ್ಬ ಆಚರಣೆ ಈದ್ ಮಿಲಾದ್ ಕಾರ್ಯಕ್ರಮದ ಅಂಗವಾಗಿ ಮೊಗರ್ಪಣೆ ಜುಮಾ ಮಸ್ಜಿದ್ ಮೀಲಾದ್ ಸಮಿತಿ ರಚನಾ ಸಭೆ ಆ.೧೫ ರಂದು ನಡೆಯಿತು.
ಜಮಾಅತ್ ಆಡಳಿತ ಸಮಿತಿ ಎಚ್ ಐ ಜೆ ಕಮಿಟಿ ಯ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ರವರ ಅಧ್ಯಕ್ಷತೆ ಯಲ್ಲಿ ಮದ್ರಸಾ ಸಭಾಂಗಣದಲ್ಲಿ ಸಭೆ ನಡೆಯಿತು.


ಸ್ಥಳೀಯ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಖಾಮಿಲ್ ರವರು ದುವಾ ನೆರವೇರಿಸಿ ಪೈಗಂಬರ್ ರವರ ಪವಿತ್ರ ಜನ್ಮ ದಿನಾಚರಣೆಯ ಸಂದೇಶ ವನ್ನು ನೀಡಿದರು.
ಬಳಿಕ ಕಾರ್ಯಕ್ರಮದ ಯಶಸ್ವಿಗಾಗಿ ಮೀಲಾದ್ ಸ್ವಾಗತ ಸಮಿತಿ ರಚಿಸಿ ಚೇರ್ಮೆನ್ ಆಗಿ ಹನೀಫ್ ಜಯನಗರ, ಕಂನ್ವಿನರ್ ರಾಗಿ ಅಶ್ರಫ್ ಸಂಗಮ್ ರವರನ್ನು ಹಾಗೂ ೩೦ಕ್ಕೂ ಹೆಚ್ಚು ಮಂದಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.


ವೇದಿಕೆಯಲ್ಲಿ ಜಮಾಅತ್ ಸಮಿತಿ ಉಪಾಧ್ಯಕ್ಷ ಉಸ್ಮಾನ್ ಸಿ ಎಂ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಎಸ್ ಯು,ಕಟ್ಟಡ ಸಮಿತಿ ಅಧ್ಯಕ್ಷ ಅಬ್ದುಲ್ ಸಮದ್ ಹಾಜಿ,ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎಸ್ ವೈ, ಕೋಶಾದಿಕಾರಿ ಮಹಮ್ಮದ್ ಆದರ್ಶ,ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ,ಮುಅಲ್ಲಿರಾದ ಯೂಸುಫ್ ಮದನಿ, ಹಂಝ ಸಖಾಫಿ, ನಾಸಿರ್ ಸಖಾಫಿ, ಅಬ್ದುಲ್ ರಶೀದ್ ಝನಿ, ಅಬೂಬಕ್ಕರ್ ಸಿದ್ದಿಕ್ ಸಅದಿ, ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಅಬ್ದುಲ್ ಕರೀಂ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.