ಅರಂತೋಡಿನಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಪಂಜಿನ ಮೆರವಣಿಗೆ

0


ವಿಶ್ವ ಹಿಂದೂ ಪರಿಷದ್ ಭಜರಂಗದಳ ಮಾತೃ ಶಕ್ತಿ ದುರ್ಗಾವಾಹಿನಿ ಹನುಮಾನ್ ಶಾಖೆ ಅರಂತೋಡು ಸುಳ್ಯ ಪ್ರಖಂಡ, ಅಖಂಡ ಭಾರತ ಸಂಕಲ್ಪ ಯಾತ್ರೆಯ ಸಲುವಾಗಿ ಪ್ರತಿ ವರ್ಷದಂತೆ ಅಖಂಡ ಸಂಕಲ್ಪ ಯಾತ್ರೆಯ ಮೆರವಣಿಗೆಯು ಕೋಡಂಕೇರಿಯಿಂದ ದುರ್ಗಾಮಾತಾ ಭಜನಾ ಮಂದಿರದ ಎದುರುಗಡೆ ಸಂಪನ್ನಗೊಂಡು ಸಿರಿಸೌಧ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕರಾದ ಪದ್ಮನಾಭ ಯು. ಎಸ್. ವಹಿಸಿದ್ದರು. ಧಾರ್ಮಿಕ ಉಪನ್ಯಾಸವನ್ನು ಸಂದೀಪ್ ವಳಲಂಬೆ ವಿ. ಹೆಚ್. ಪಿ. ನ ವಿಧಿ ಪ್ರಮುಖ್ ಸುಳ್ಯ ಪ್ರಖಂಡ ಇವರು ಸ್ವಾತಂತ್ರ ಪಡೆದ ನಂತರ ನಮ್ಮ ದೇಶ ಯಾವ ರೀತಿಯಲ್ಲಿ ಬೆಳವಣಿಗೆಯನ್ನು ಕಂಡಿದೆ ಇದರ ಬಗ್ಗೆ ಉಪನ್ಯಾಸ ಮಾಡಿದರು.


ಸುಳ್ಯ ಪ್ರಖಂಡ ಅಧ್ಯಕ್ಷರಾದ ಶ್ರೀಕಾಂತ್ ಗೋಲ್ವಲ್ಕರ್ ಹಿಂದೂ ಸಮಾಜ ಇನ್ನೂ ಕೂಡ ಒಂದೇ ಮುಖವಾಗಿ ನಡೆಯದೆ ಬೇರೆ ಬೇರೆ ಗುಂಪುಗಳಾಗಿ ಸಾಗುತ್ತಿದ್ದು, ದುರದೃಷ್ಟಕರ ಎಂದು ತಿಳಿಸಿದರು. ಹಾಗೂ ಹನುಮಾನ್ ಶಾಖೆಯ ಅಧ್ಯಕ್ಷರಾದ ವಿನೋದ್ ಉಳುವಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಲ್ಲದೆ ಪರಿವಾರ ಸಂಘಟನೆಯ ಪ್ರಮುಖರಾದ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷರಾದ ಡಾ. ಲಕ್ಷ್ಮೀಶ, ನಿರ್ದೇಶಕರಾದ ದಯಾನಂದ ಕುರುಂಜಿ, ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಸಂಪಾಜೆ ವಲಯದ ಭಜನಾ ಪರಿಷತ್ತಿನ ಅಧ್ಯಕ್ಷರಾದ ಭಾರತಿ ಪುರುಷೋತ್ತಮ, ದುರ್ಗಾ ಮಾತಾ ಭಜನಾ ಮಂದಿರದ ಅಧ್ಯಕ್ಷರಾದ ತೀರ್ಥರಾಮ ಅಡ್ಕಬಳೆ, ವೀಣಾ ಯಶೋಧರ, ಪುಷ್ಪಾ ಮೇದಪ್ಪ ಹಾಗೂ ಹನುಮಾನ್ ಶಾಖೆಯ ಕಾರ್ಯಕರ್ತರು ಉಪಸ್ಥಿತರಿದ್ದರು. ಸ್ವಾಗತ ರೀನಾ ಚಂದ್ರಶೇಖರ, ಪ್ರತಿಜ್ಞಾ ವಿಧಿ ಬೋಧನೆ ಚೇತನ್ ಕೊಡಂಕೇರಿ, ಧನ್ಯವಾದವನ್ನು ಸೋಮಶೇಖರ್ ಪೈಕ ಹಾಗೂ ದೀಪ್ತಿ ಪೈಕ ನಿರೂಪಣೆ ಮಾಡಿದರು.