Home Uncategorized ಅಂತಾರಾಷ್ಟ್ರೀಯ ಕರಾಟೆಯಲ್ಲಿ ಶ್ರವಣ್ ಕೊಯಿಂಗೋಡಿಗೆ ತೃತೀಯ ಸ್ಥಾನ

ಅಂತಾರಾಷ್ಟ್ರೀಯ ಕರಾಟೆಯಲ್ಲಿ ಶ್ರವಣ್ ಕೊಯಿಂಗೋಡಿಗೆ ತೃತೀಯ ಸ್ಥಾನ

0

ಶಿವಮೊಗ್ಗದಲ್ಲಿ ನಡೆದ “ಶಿವಮೊಗ್ಗ ಓಪನ್ ಆರನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್” ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿ ಶ್ರವಣ್ ಕೊಯಿಂಗೋಡಿ ತೃತೀಯ ಸ್ಥಾನ ಪಡೆದಿದ್ದಾರೆ.

ಭಾರತೀಯ ಮೊಯೆಲ್ ಶೋಟೊಕಾನ್ ಕರಾಟೆ ಡೊ ಅಸೋಸಿಯೇಷನ್ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಆಗಸ್ಟ್ ೯ ಮತ್ತು ೧೦ರಂದು ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಾನಾ ವಿಭಾಗದ ಕರಾಟೆ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಾಲಕರ ಗ್ರೀನ್ ಬೆಲ್ಟ್‌ನ ಕಟಾ ವಿಭಾಗದಲ್ಲಿ ಶ್ರವಣ್ ಕೊಯಿಂಗೋಡಿ ತೃತೀಯ ಸ್ಥಾನ ಪಡೆದು, ಬ್ರೌನ್ಸ್ ಮೆಡಲ್ ಪಡೆದಿದ್ದಾನೆ.

ಶ್ರವಣ್ ಕೊಯಿಂಗೋಡಿ ಗೂನಡ್ಕದ ಮಾರುತಿ ಪಬ್ಲಿಕ್ ಸ್ಕೂಲ್‌ನಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ಸುಳ್ಯ ಕೊಯಿಂಗೋಡಿಯ ದಿನೇಶ್ ಹಾಗೂ ಕಾವ್ಯಾ ದಂಪತಿಯ ಪುತ್ರ. ಈತನಿಗೆ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರು ತರಬೇತಿ ನೀಡುತ್ತಿದ್ದಾರೆ.

NO COMMENTS

error: Content is protected !!
Breaking