ಸುಳ್ಯದ ಸೈಂಟ್ ಜೋಸೆಫ್ ಹಾಗೂ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸುಳ್ಯದ ಸೈಂಟ್ ಜೋಸೆಫ್ ಹಾಗೂ ಸೈಂಟ್ ಬ್ರಿಜಿಡ್ಸ್ ಶಾಲೆಯು ಜಂಟಿಯಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಯೋಗೀಶ್ ಭರತ್ ಮಾಜಿ ಯೋಧರು ಆಗಮಿಸಿದ್ದರು. ಶಾಲಾ ಜೊತೆ ಕಾರ್ಯದರ್ಶಿ
ರೆ| ಫಾ| ಓಲ್ವಿನ್
ಡಿ’ ಕುನ್ಹಾ , ಸೈಂಟ್ ಜೋಸೆಫ್ ಪ್ರೌಢಶಾಲಾ ಪೋಷಕ ಸಮಿತಿಯ ಅಧ್ಯಕ್ಷೆಯಾಗಿರುವ ಶ್ರೀಮತಿ ಸುಮಲತಾ ಪಿವಿ,
ಪ್ರಾಥಮಿಕ
ಶಾಲಾ ಪೋಷಕ ಸಮಿತಿಯ ಅಧ್ಯಕ್ಷೆಯಾಗಿರುವ ಶ್ರೀಮತಿ ಸುನಿತಾ ಮೊಂತರೋ, ಪೂರ್ವ ಪ್ರಾಥಮಿಕ ಪೋಷಕ ಸಮಿತಿಯ ಅಧ್ಯಕ್ಷರಾಗಿರುವ ಪ್ರವೀಣ್ ಕುಮಾರ್, ಸೈಂಟ್ ಬ್ರಿಜಿಡ್ಸ್ ಅನುದಾನಿತ ಶಾಲಾ ಪೋಷಕ ಸಮಿತಿಯ ಅಧ್ಯಕ್ಷರಾಗಿರುವ ನವೀನ್ ಚಂದ್ರ ಚಾತುಬಾಯಿ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರ ಕ್ರಾಸ್ತ , ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ನವೀನ್ ಮಚಾದೊ, ಚರ್ಚ್ ಪಾಲನ ಮಂಡಳಿಯ ಕಾರ್ಯದರ್ಶಿಯಾದ ಶ್ರೀಮತಿ ಜೂಲಿಯ ಕ್ರಾಸ್ತಾ, ಸೈಂಟ್ ಬ್ರಿಜಿಡ್ಸ್ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಆ್ಯಂಟಿನಿ ಮೇರಿ, ಸೈಂಟ್ ಜೋಸೆಫ್ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾದ ಯೋಗೀಶ್ ಭರತ್ ರವರು ಧ್ವಜಾರೋಹಣ ನೆರವೇರಿಸಿದರು. ನಂತರ ರಾಷ್ಟ್ರಗೀತೆ, ಧ್ವಜ ಗೀತೆ ಹಾಡಲಾಯಿತು. ತದನಂತರ ಫಾದರ್ ರವರು ಮಾಜಿ ಯೋಧರಾದ ಯೋಗಿಶ್ ಭರತ್ ಅವರನ್ನು ಸನ್ಮಾನಿಸಿದರು. ಅತಿಥಿಗಳು ಸಭೆಯ ನಿರ್ದೇಶಿಸಿ ಮಾತನಾಡಿದರು.ಸೈಂಟ್ ಬ್ರಿಜಿಡ್ಸ್ ನ ವಿದ್ಯಾರ್ಥಿನಿಯರು ಸಮೂಹ ಗೀತೆಯನ್ನು ಹಾಡಿದರು. ಸೈಂಟ್ ಜೋಸೆಫ್ ನ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮ ನೀಡಿದರು. ರೆ|ಫಾ|ಓಲ್ವಿನ್ ಡಿ’ಕುನ್ಹಾರವರು ಅಧ್ಯಕ್ಷೀಯ ಭಾಷಣ ನೆರವೇರಿಸಿದರು.

ಸಿ| ಆ್ಯಂಟಿನಿ ಮೇರಿ ಸ್ವಾಗತಿಸಿ, ಸಿ| ಮೇರಿ ಸ್ಟೆಲ್ಲಾ ವಂದಿಸಿದರು . ಶಿಕ್ಷಕಿ ಶ್ರೀಮತಿ ಜೂಲಿಯೆಟ್ ವಿದ್ಯಾರ್ಥಿನಿಯರಾದ ಸಮ್ಮನ್ವಿ ಹಾಗೂ ಫಿಲ್ಜಾ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿತಿಂಡಿಯನ್ನು ವಿತರಿಸಲಾಯಿತು. ಎಲ್ಲಾ ಶಿಕ್ಷಕ ಶಿಕ್ಷಕೇತರ ವರ್ಗದವರು ಸಹಕರಿಸಿದರು.