














ಶಿವಮೊಗ್ಗದಲ್ಲಿ ನಡೆದ “ಶಿವಮೊಗ್ಗ ಓಪನ್ ಆರನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್” ನಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಐದನೇ ತರಗತಿಯ ವಿದ್ಯಾರ್ಥಿ ತಶ್ವಿಕ್ ಎಂ ಆಚಾರ್ಯ ದೊಡ್ಡಡ್ಕ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಭಾರತೀಯ ಮೊಯೆಲ್ ಶೋಟೊಕಾನ್ ಕರಾಟೆ ಡೊ ಅಸೋಸಿಯೇಷನ್ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಆಗಸ್ಟ್ 9 ಮತ್ತು 10 ರಂದು ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಾನಾ ವಿಭಾಗದ ಕರಾಟೆ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಾಲಕರ ಗ್ರೀನ್ ಬೆಲ್ಟ್ ನ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು , ಮಲ್ಲೇಶ್ ಆರ್. ಎಂ, ಶ್ರೀಮತಿ ಭಾರತಿ ಎ. ವಿ ದಂಪತಿಗಳ ಪುತ್ರ .ಈತನಿಗೆ ಕರಾಟೆ ಶಿಕ್ಷಕರಾದ ಚಂದ್ರಶೇಖರ ಕನಕಮಜಲು ತರಬೇತಿ ನೀಡಿರುತ್ತಾರೆ.










