ನೆಲ್ಲೂರು ಕೆಮ್ರಾಜೆ ಗ್ರಾಮದ ಕೀಲಾರ್ಕಜೆ ದಿ. ಕೇಶವ ಎಂಬವರ ಪುತ್ರ ಪ್ರದೀಪ್ ಎಂಬವರು ಇಂದು(ಆ. 16) ಹೃದಯಾಘಾತದಿಂದ ನಿಧನರಾದರು.
ಅವರಿಗೆ 40 ವರ್ಷ ವಯಸ್ಸಾಗಿತ್ತು.















ಕಣ್ಣೂರಿನ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ಪ್ರದೀಪ್ ರವರು ಕಳೆದ ಕೆಲ ಸಮಯದಿಂದ ಕನ್ಯಾಕುಮಾರಿಯ ಕೃಷ್ಣ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಅವರ ಸಂಬಂಧಿಕರ ಕಾರ್ಯಕ್ರಮಕ್ಕೆಂದು ಕೆಲ ದಿನದ ಹಿಂದೆ ಅವರ ಮನೆಗೆ ಬಂದಿದ್ದರು. ಆ.14ರ ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮರಳಿದ್ದರು. ನಿನ್ನೆ ರಾತ್ರಿ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ಹೃದಯಘಾತವಾಗಿರುವುದಾಗಿ ವೈದ್ಯರು ಹೇಳಿದರೆನ್ನಲಾಗಿದೆ.
ಮೃತರು ತಾಯಿ ಗೀತಾ, ಪತ್ನಿ ಪ್ರತಿಮಾ, ಸಹೋದರ ಶಿವಪ್ರಸಾದ್, ಸಹೋದರಿಯರಾದ ರಾಧಿಕ, ಪಲ್ಲವಿ ಯವರನ್ನು ಅಗಲಿದ್ದಾರೆ.










