ಗುತ್ತಿಗಾರಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ- ಪಂಜಿನ ಮೆರವಣಿಗೆ

0

ಹಿಂದೂ ಜಾಗರಣ ವೇದಿಕೆ
ಗುತ್ತಿಗಾರು ವಲಯ ವತಿಯಿಂದ 78ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಅಖಂಡ ಭಾರತ ಸಂಕಲ್ಪ ದಿನಯ ಪ್ರಯುಕ್ತ ಪಂಜಿನ ಮೆರವಣಿಗೆ
ಆ.14 ನಡೆಯಿತು.

ಸಂಜೆ ಆದಿಶಕ್ತಿನಗರ ಬಾಕಿಲದಲ್ಲಿ ನಿವೃತ್ತ ಎ.ಎಸ್.ಐ. ಶಾಂತಪ್ಪ ಗೌಡ ಇಜ್ಜೇಲುಮಕ್ಕಿ ಪಂಜಿನ ಮೆರವಣಿಗೆ ಉದ್ಘಾಟಿಸಿದರು. ವೆಂಕಟ್ ದಂಬೆಕೋಡಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಮುತ್ತಪ್ಪ ನಗರದವರೆಗೆ ಪಂಜಿನ
ಮೆರೆವಣಿಗೆ ನಡೆದು ಶ್ರೀ ಮುತ್ತಪ್ಪನಗರ ಇಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ದಿಕ್ಕೂಚಿ ಭಾಷಣವನ್ನು ಸಾಮಾಜಿಕ ಕಾರ್ಯಕರ್ತ ನವೀನ್ ಸುಬ್ರಹ್ಮಣ್ಯ,
ನೆರವೇರಿಸಿದರು. ಹಿಂದೂ ಜಾಗರಣ ವೇದಿಕೆಯ ಸಂಯೋಜಕ ಸಚಿನ್ ಮೊಟ್ಟೆಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಹರ್ಷಿತ್ ಕಡ್ತಲ್ ಕಜೆ ಧನ್ಯವಾದ ಸಮರ್ಪಿಸಿದರು.