














ಸುಳ್ಯ ಜಟ್ಟಿಪಳ್ಳದ ರಾಮಚಂದ್ರ ಪೆಲತ್ತಡ್ಕರವರ ಪುತ್ರ ಡಾ. ಕಾರ್ತಿಕ್ ಆರ್.ಚಂದ್ರ ಮತ್ತು ಮೂಡಬಿದ್ರೆಯ ಡಾ. ಮೋಹನ್ ಆಳ್ವರವರ ಪುತ್ರ ಡಾ. ವಿನಯ್ ಆಳ್ವರವರು ತುಮಕೂರಿನ ಬ್ಯಾಡ್ಮಿಂಟನ್ ಆಶ್ರಯದಲ್ಲಿ ಜರಗಿದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ತುಮಕೂರು ಇವರು ಆಯೋಜಿಸಿದ ರಾಜ್ಯಮಟ್ಟದ ಪುರುಷರ ೨೮ನೇ ಸೋಮಣ್ಣ ಮೆಮೋರಿಯಲ್ ಶಟಲ್ ಟೂರ್ನಮೆಂಟ್ ಡಬಲ್ಸ್‌ನಲ್ಲಿ ವಿಜೇತರಾಗಿ ರಾಷ್ಟ್ರಮಟ್ಟದ ಟೂರ್ನಮೆಂಟ್‌ಗೆ ಆಯ್ಕೆಯಾಗಿದ್ದಾರೆ.
ಆ. ೧೬ ಮತ್ತು ೧೭ರಂದು ತುಮಕೂರಿನಲ್ಲಿ ರಾಜ್ಯಮಟ್ಟದ ಟೂರ್ನಮೆಂಟ್ ನಡೆಯಿತು.
ಇವರುಗಳು ಕಳೆದ ಬಾರಿ ೨೦೨೪-೨೫ನೇ ಸಾಲಿನಲ್ಲಿ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜ್ ಮತ್ತು ಹೆಲ್ತ್ ಸೈನ್ಸಸ್ ಬೆಂಗಳೂರು ಇವರು ಆಯೋಜಿಸಿದ್ದ ರಾಜ್ಯಮಟ್ಟದ ಮೆನ್ಸ್ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಟೂರ್ನಮೆಂಟ್‌ನಲ್ಲಿಯೂ ವಿಜೇತರಾಗಿ ಕಪ್ ತಮ್ಮದಾಗಿಸಿಕೊಂಡಿದ್ದರು.
ಡಾ. ಕಾರ್ತಿಕ್ ಆರ್.ಚಂದ್ರರವರು ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ಲೆಕ್ಕಾಧೀಕ್ಷಕ ರಾಮಚಂದ್ರ ಗೌಡ ಪೆಲತ್ತಡ್ಕ ಹಾಗೂ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಆಡಳಿತಾಧಿಕಾರಿ ಶ್ರೀಮತಿ ಬಿ.ಜಿ.ರಾಧಾಮಣಿಯವರ ಪುತ್ರ. ಡಾ. ವಿನಯ್ ಆಳ್ವರವರು ಸರ್ಜನ್ ಆಗಿದ್ದು, ಮೂಡಬಿದ್ರೆಯ ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್‌ನ ಸದಸ್ಯರಾಗಿದ್ದಾರೆ. ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಗಳ ಸ್ಥಾಪಕರಾದ ಡಾ. ಮೋಹನ್ ಆಳ್ವರವರ ಪುತ್ರ.










