ನಿವೃತ್ತ ಯೋಧನಿಗೆ ಸನ್ಮಾನ, ರಾಷ್ಟ್ರೀಯ ಕ್ರೀಡಾಪಟುವಿಗೆ ಗೌರವ
ಶಿವಾಜಿ ಯುವಕ ಮಂಡಲ ( ರಿ.) ಕೂತ್ಕುಂಜ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿವಿಧ ಸ್ಪರ್ಧೆಗಳು ಹಾಗೂ ನಿವೃತ್ತ ಯೋಧರಿಗೆ ಮತ್ತು ರಾಷ್ಟ್ರೀಯ ಕ್ರೀಡಾಪಟುವಿಗೆ ಸನ್ಮಾನ ಕಾರ್ಯಕ್ರಮವು ಆ. 17.ರಂದು ಕೂತ್ಕುಂಜದ ಅಟಲ್ಜೀ ಕ್ರೀಡಾಂಗಣದಲ್ಲಿ ನಡೆಯಿತು.
ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ಕೆರೆಯವರು ಉದ್ಘಾಟಿಸಿದರು. ಶಿವಾಜಿ ಯುವಕ ಮಂಡಲದ ಅಧ್ಯಕ್ಷ ಆದರ್ಶ ಚಿದ್ಗಲ್ಲು ಅಧ್ಯಕ್ಷತೆ ವಹಿಸಿದ್ದರು.
















ಭೂಸೇನೆಯ ನಿವೃತ್ತ ಕಮೀಷನ್ಡ್ ಆಫೀಸರ್ ಗಿರೀಶ್ ಆರ್ನೋಜಿ ಯವರನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ಕ್ರೀಡಾಪಟು ಮೋಕ್ಷಿತ್ ಚಿದ್ಗಲ್ ಅವರಿಗೆ ಗೌರವಾರ್ಪಣೆ ನಡೆಯಿತು.
ನಿವೃತ್ತ ಭೂಸೇನಾ ಸೈನಿಕ ವಾಸುದೇವ ಕೆ. ಸನ್ಮಾನ ನೆರವೇರಿಸಿದರು.
ಶಿವಾಜಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗೀಶ್ ಚಿದ್ಗಲ್ಲು ಶುಭ ಹಾರೈಸಿದರು. ಶ್ರೀಮತಿ ಸುಶ್ಮಿತ ಆದಿತ್ಯ ಚಿದ್ಗಲ್ಲು ಪ್ರಾರ್ಥಿಸಿದರು. ಯುವಕ ಮಂಡಲ ಕಾರ್ಯದರ್ಶಿ ಲಿಖಿತ್ ಅಜ್ಜಿಹಿತ್ಲು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಚಂದ್ರಶೇಖರ ಇಟ್ಯಡ್ಕ ಪ್ರಸ್ತಾವನೆಗೈದರು. ಕಾರ್ಯಕ್ರಮ ನಿರ್ದೇಶಕ ಸೃಜನ್ ಪೈಸಾರಿ ವಂದಿಸಿದರು. ಷಣ್ಮುಖ ಹೊಸೊಕ್ಲು , ಜಯರಾಮ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಪೂರ್ವಾಧ್ಯಕ್ಷ ದೇವಿಪ್ರಸಾದ್ ಕುಳ್ಳಾಜೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪದ್ಮಾವತಿ ಮತ್ತು ಚಿನ್ನಪ್ಪ ಗೌಡ ಚಿದ್ಗಲ್ ದಂಪತಿ ಸಂಘಕ್ಕೆ ದೀಪವೊಂದನ್ನು ಕೊಡುಗೆಯಾಗಿ ನೀಡಿದರು.
ಸಂಜೆ ಆದರ್ಶ ಚಿದ್ಗಲ್ಲು ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಗತಿಪರ ಕೃಷಿಕ ಮಾಧವ ಗೌಡ ಕಕ್ಯಾನ ಹಾಗೂ ಶ್ರೀಮತಿ ಶ್ಯಾಮಲಾ ಕಲ್ಲಾಜೆ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಮತಿ ಕಮಲ ಯೋಗೀಶ್ ಚಿದ್ಗಲ್ಲು ಬಹುಮಾನಿತರ ಪಟ್ಟಿ ವಾಚಿಸಿದರು. ಯುವಕ ಮಂಡಲದ ನಿಕಟಪೂರ್ವಾಧ್ಯಕ್ಷ ದೇವಿಪ್ರಸಾದ್ ಕುಳ್ಳಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯರಾಮ ಕಲ್ಲಾಜೆ ಸ್ವಾಗತಿಸಿದರು. ಲಿಖಿತ್ ಅಜ್ಜಿಹಿತ್ಲು ವಂದಿಸಿದರು. ಷಣ್ಮುಖ ಹೊಸೊಕ್ಲು ಕಾರ್ಯಕ್ರಮ ನಿರೂಪಿಸಿದರು.










