ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಶ್ರೀಕೃಷ್ಣಜನ್ಮಾಷ್ಟಮಿ ಮೊಸರು ಕುಡಿಕೆ ಸಭಾ – ಸನ್ಮಾನ ಸಮಾರಂಭ

0

ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ
ಸಭಾ – ಸನ್ಮಾನ ಸಮಾರಂಭವು ಆ.17 ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ನೇಹಿತರ ಕಲಾ ಸಂಘ ಅಧ್ಯಕ್ಷ ಪದ್ಮನಾಭ ಗೌಡ ಬೀಡು ವಹಿಸಿದ್ದರು.


ಸಮಾರಂಭದಲ್ಲಿ ಅಭ್ಯಾಗತರಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿಯವರನ್ನು ಗೌರವಿಸಲಾಯಿತು. ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್. ರೈ, ದೆಹಲಿ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ, ಮೆಸ್ಕಾಂ ಬೆಳ್ಳಾರೆ ವಿಭಾಗದ ಜೂನಿಯರ್ ಇಂಜಿನಿಯರ್ ಪ್ರಸಾದ್ ಕತ್ಲಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಜಪಿಲ ಶ್ರೀಮಹಾ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ ಪಡ್ಪು, ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಪೂರ್ಣಿಮಾ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಬೆಳ್ಳಾರೆ ಕೆ.ಪಿ.ಎಸ್ ಉಪ ಪ್ರಾಂಶುಪಾಲೆ ಉಮಾ ಕುಮಾರಿ ಇವರಿಗೆ ಗುರುರತ್ನ ಪುರಸ್ಕಾರ, ನಿವೃತ್ತ ಯೋಧ ಶ್ರೀಧರ್ ಎಸ್.ಪೂಜಾರಿ ಸಾರಕೆರೆ, 2025 ರ ಆರ್ಯಭಟ ಗೋಲ್ಡನ್ ಪ್ರಶಸ್ತಿ ಪುರಸ್ಕೃತರಾದ ಪ್ರಮೋದ್ ಕುಮಾರ್ ರೈ ಬೆಳ್ಳಾರೆ ಇವರಿಗೆ ಸನ್ಮಾನ, ಯುವ ಯಕ್ಷಗಾನ ಭಾಗವತರು ವಿದುಷಿ ಹೇಮಸ್ವಾತಿ ಕುರಿಯಾಜೆ, ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ 4 ನೇ ರ್‍ಯಾಂಕ್ ಪಡೆದ ಕು. ಶರಧಿ ನೆಟ್ಟಾರು, ಬೆಳ್ಳಾರೆ ಕೆ. ಪಿ.ಎಸ್ ಶಾಲೆಗೆ ಕನ್ನಡ ಮಾಧ್ಯಮದಲ್ಲಿ ಟಾಪರ್ ವಿದ್ಯಾರ್ಥಿ ಧನ್ಯಶ್ರೀ ನೆಲ್ಲಿಗುಡ್ಡೆ ಇವರುಗಳನ್ನು ಸಾಧಕ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರಾಧಾ ಕೃಷ್ಣ ವೇಷ ನೃತ್ಯದ ತರಬೇತು ನೀಡಿದ ಅಶೋಕ್ ಬಸ್ತಿಗುಡ್ಡೆ, ಸ್ನೇಹಾಂಜಲಿ ಕುಣಿತ ಭಜನಾ ತಂಡದ ವಿದ್ಯಾರ್ಥಿಗಳನ್ನು, ಧರ್ಮ ಚಾವಡಿ ಯುವ ಚಲನಚಿತ್ರ ನಟ ಯತೀಶ್ ಕುಲಾಲ್, ಸಹಕರಿಸಿದ ಸಂಘ ಸಂಸ್ಥೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಗಣೇಶ್ ಪಾಟಾಳಿ, ನಿಕಟ ಪೂರ್ವಅಧ್ಯಕ್ಷ ವಸಂತ ಉಲ್ಲಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ನೇಹಿತರ ಕಲಾಸಂಘದ ಉಪಾಧ್ಯಕ್ಷರಾದ ವಸಂತ ಗೌಡ ಪಡ್ಪು, ಜತೆ ಕಾರ್ಯದರ್ಶಿ , ಬಾಲಕೃಷ್ಣ ಪೂಜಾರಿ ತಡಗಜೆ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಮಹಾಲಿಂಗ ಕುರುಂಬುಡೇಲು ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು. ಸ್ನೇಹಾಂಜಲಿ ಕುಣಿತ ಭಜನಾ ತಂಡದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪೂರ್ವ ಅಧ್ಯಕ್ಷ ಸಂಜಯ್ ನೆಟ್ಟಾರು ಸ್ವಾಗತಿಸಿ, ಕೋಶಾಧಿಕಾರಿ ಶ್ರೀನಿವಾಸ ನಾಯ್ಕ ಕುರುoಬುಡೇಲು ವಂದಿಸಿದರು.

ಶಿಕ್ಷಕರಾದ ಲಿಂಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಊರಿನವರು, ಕ್ರೀಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.