ದೇವ ಗೆಳೆಯರ ಬಳಗ, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲ ದೇವ ಇವುಗಳ ಜಂಟಿ ಆಶ್ರಯದಲ್ಲಿ 35ನೇ ವರ್ಷದ ವಿಜೃಂಭಣೆಯ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆ. 16 ರಂದು ನಡೆಯಿತು.
ಪ್ರಗತಿಪರ ಕೃಷಿಕ ಸದಾಶಿವಯ್ಯ ದೇವರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಕಾರ್ಯದರ್ಶಿ ಜಯಂತ ದೇವ ನೆರವೇರಿಸಿದರು.
ವೇದಿಕೆಯಲ್ಲಿ ಊರ ಹಿರಿಯರಾದ ಶೀನಪ್ಪ ಗೌಡ ಪಡ್ಪು, ಪ್ರಗತಿಪರ ಕೃಷಿಕ ವಸಂತ ಬೊಳ್ಳಾಜೆ, ಗ್ರಾ.ಪಂ. ಸದಸ್ಯ ರಮೇಶ್ ಪಡ್ಪು, ಜ್ಯೋತಿಲಕ್ಷ್ಮಿ, ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಕಲಾ ಪದ್ಮನಾಭ ದೇವ ಉಪಸ್ಥಿತರಿದ್ದು ಶುಭಹಾರೈಸಿದರು.

ನಂತರ ಪುರುಷರಿಗೆ ಮೊಸರು ಕುಡಿಕೆ, ಮಹಿಳೆಯರಿಗೆ ಜಾರುಕಂಬ ಹಾಗೂ 5 ವರ್ಷದ ಒಳಗಿನ ಮಕ್ಕಳಿಗೆ ಕೃಷ್ಣವೇಷ ಮತ್ತು ಇತರ ಸ್ಪರ್ಧಾ ಕಾರ್ಯಕ್ರಮ ನಡೆಯಿತು.















ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಉಪನ್ಯಾಸವನ್ನು ಸಾಹಿತಿ ಮತ್ತು ಸಮಾಜ ಸೇವಕ ಉದಯ ಭಾಸ್ಕರ ಸುಳ್ಯ ಮಾಡಿದರು.
ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಸಮಾರೋಪ ಸಮಾರಂಭ
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ದೇವ ಗೆಳೆಯರ ಬಳದ ಅಧ್ಯಕ್ಷ ಮುಕುಂದ ಹಿರಿಯಡ್ಕ ವಹಿಸಿದ್ದರು. 26 ವರ್ಷದಿಂದ ಸೇವೆ ಸಲ್ಲಿಸಿ ವರ್ಗಾವಣೆಯಾದ ದೇವ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲತಾ ಕೆ.ಎನ್. ಮತ್ತು 46 ವರ್ಷಗಳಿಂದ ಅಂಚೆ ವಿತರಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾದ ಕಂದ್ರಪ್ಪಾಡಿ ಶಾಖೆಯ ಪುರುಷೋತ್ತಮ ಕೆ.ಎಮ್. ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇವ ಸರಕಾರಿ ಶಾಲೆಯಲ್ಲಿ ಒಂದರಿಂದ 5 ನೇ ತರಗತಿಯವರೆಗೆ ಕಲಿತು 2024-25 ನೇ ಸಾಲಿನಲ್ಲಿ 10 ನೇ ತರಗತಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಚಸ್ವಿತಾ ಕೆ. (551 ಅಂಕ), ಮನ್ವಿತ್ ರಾಜ್ (551 ಅಂಕ), ವಂದನಾ….. ಅಂಕ, ಪಿಯುಸಿಯಲ್ಲಿ 485 ಅಂಕ ಪಡೆದ ಶರಣ್ಯ ಹಿರಿಯಡ್ಕರನ್ನು ಸನ್ಮಾನಿಸಲಾಯಿತು.

ದೇವ ಸರಕಾರಿ ಶಾಲೆಯಲ್ಲಿ ಒಂದರಿಂದ 5 ನೇ ತರಗತಿಯವರೆಗೆ ಕಲಿಯುತ್ತಿರುವ ಶಾಲಾ ಮಕ್ಕಳಿಗೆ ಕಲಿಕಾ ಪ್ರೋತ್ಸಾಹಕ ಬಹುಮಾನವನ್ನು ದಾನಿಗಳಾದ ರಮೇಶ್ ಪಡ್ಪು ಮತ್ತು ಮನೆಯವರು ನೀಡಿದರು.
ವಳಲಂಬೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಲೋಹಿತ್ ಬಾಳಿಕಳರವರು ಮಾತನಾಡಿದರು.
ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಕಡ್ಲಾರು, ಸಂಪಾಜೆ ವಲಯ ಗಸ್ತು ಅರಣ್ಯಪಾಲಕ ಕಾರ್ತಿಕ್ ದೇವ, ದೇವ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲಿಖಿತಾ ಪಾರೆಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೆಳೆಯರ ಬಳಗದ ಗೌರವಾಧ್ಯಕ್ಷ ಯೋಗೀಶ್ ದೇವ ಸ್ವಾಗತಿಸಿ, ಸದಸ್ಯ ಉಮೇಶ್ ಬಿರ್ಮುಕಜೆ ವಂದಿಸಿದರು. ರಮೇಶ್ ಮೆಟ್ಟಿನಡ್ಕ ಕಾರ್ಯಕ್ರಮ ನಿರೂಪಿಸಿದರು.










