














ದೊಡ್ಡೇರಿ ತೂಗುಸೇತುವೆ ಶಿಥಿಲಗೊಂಡಿದ್ದು, ಸದ್ರಿ ಸೇತುವೆಯನ್ನು ದುರಸ್ತಿಪಡಿಸುವಂತೆ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾರಿಗೆ ಸೇತುವೆ ಫಲಾನುಭವಿಗಳು ಆ. 19ರಂದು ಮನವಿ ನೀಡಿದರು.
ಈ ಸಂದರ್ಭದಲ್ಲಿ ಸುಬ್ಬಯ್ಯ ಡಿ.ಎನ್ ದೊಡ್ಡೇರಿ, ದಯಾನಂದ ಡಿ.ಕೆ ದೊಡ್ಡೇರಿ, ಜಗದೀಶ್ ದೊಡ್ಡೇರಿ ಉಪಸ್ಥಿತರಿದ್ದರು.










