ಅರಿವು ಕೇಂದ್ರ ದೇವಚಳ್ಳ ದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.















ಬಳಿಕ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ‘ನನ್ನ ದೇಶ ನನ್ನ ಪರಿಕಲ್ಪನೆ ‘ ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ, 5ನೇ ತರಗತಿಯಿಂದ – 7 ನೇ ತರಗತಿಯವರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೇಳುವುದು, ಹಾಗೆಯೇ 3ನೇ ತರಗತಿಯಿಂದ – 4ನೇ ತರಗತಿ ಯವರಿಗೆ ಭಾರತದ ಧ್ವಜ ಬಿಡಿಸಿ ಬಣ್ಣ ತುಂಬುವುದ ನಡೆಸಲಾಯಿತು.
ಈ ಸಂಧರ್ಭದಲ್ಲಿ ಗೌರವ ಉಪಸ್ಥಿತಿಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಬಾಬು ಗೌಡ ಅಚ್ರಪ್ಪಾಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೌಮ್ಯ ಸಿ. ಡಿ., ಶಿಕ್ಷಕಿ ಸ. ಹಿ. ಪ್ರಾ. ಶಾಲೆ ದೊಡ್ಡತೋಟ, ಭಾರತಿ ಶಿಕ್ಷಕಿ ಜ್ಞಾನದೀಪ ಎಲಿಮಲೆ ಯವರು ಉಪಸ್ಥಿತರಿದ್ದರು.
ಮಕ್ಕಳಿಗೆ ಸ್ಪರ್ಧೆಗೆ ಬಹುಮಾನದ ಪ್ರಾಯೋಜಕರಾಗಿ ನಿವೃತ್ತ ಶಿಕ್ಷಕಿ ಪುಷ್ಪಲತಾ ಬಾಬು ಗೌಡ ಅಚ್ರಪ್ಪಾಡಿ ನೀಡಿದರು. ಕಾರ್ಯಕ್ರಮವನ್ನು ಗ್ರಂಥಾಲಯ ಮೇಲ್ವಿಚಾರಕರು ಪ್ರಫುಲ್ಲ ಶ್ರೀಕಾಂತ್ ಪಾರೆಪ್ಪಾಡಿಯವರು ನಿರ್ವಹಿಸಿದರು.










