ದಾಸರಾಬೈಲು ಶಾಲೆಯಲ್ಲಿ 79ನೇ ಸ್ವಾತಂತ್ರೋತ್ಸವ

0

ಮರ್ಕಂಜದ ಸ.ಕಿ.ಪ್ರಾ ಶಾಲೆ ದಾಸರ ಬೈಲು ಇಲ್ಲಿ 79ನೇ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ತ್ಯಾಗರಾಜ ಕೋಡಿ ಧ್ವಜರೋಹಣ ಮಾಡಿದರು.

ಗ್ರಾಮ ಪಂಚಾಯತ್ ಮರ್ಕಂಜ ಇದರ ಸದಸ್ಯರಾದ ಚಿತ್ರರಂಜನ್ ಕೋಡಿ, ಶ್ರೀಮತಿ ರಮತಾ ಕುದ್ಕುಳಿ ಧ್ವಜವಂದನೆ ಸ್ವೀಕರಿಸಿದರು.

ಊರಿನ ಹಿರಿಯರು ನಿಕಟಪೂರ್ವ ಎಸ್ ಡಿ ಎಂ ಸಿ ಅಧ್ಯಕ್ಷರುಗಳು, ಮುಖ್ಯ ಅತಿಥಿಯಾಗಿ ನಿವೃತ ಶಿಕ್ಷಕಿ ತೀರ್ಥಕುಮಾರಿ ನರಿಯೂರು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚರಣ್, ಪೋಷಕರು ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದರು.

ನಂತರ ಮೆರವಣಿಗೆ ನಡೆಯಿತು.
ವೇದಿಕೆಯಲ್ಲಿ ಶ್ರೀಮತಿ ತೀರ್ಥಕುಮಾರಿ, ಶಂಕರನಾರಾಯಣ ಉಪಾಧ್ಯಾಯರು, ಗ್ರಾಮ ಪಂಚ್ಯಾತ್ ಅಧ್ಯಕ್ಷರಾದ ಶ್ರೀಮತಿ ಗೀತಾ ಹೊಸಳಿಕೆ, ಸದಸ್ಯರಾದ ಚಿತ್ರರಂಜನ್ ಕೋಡಿ, ಶ್ರೀಮತಿ ರಮತಾ ಕುದ್ಕುಳಿ, ಮುಖ್ಯಗುರುಗಳಾದ ಬೆಳ್ಳಪ್ಪ ಕೆ., ತ್ಯಾಗರಾಜ ಕೋಡಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ದತ್ತಿನಿಧಿ ಪುರಸ್ಕಾರ ಕಾರ್ಯಾಕ್ರಮ ನಡೆಯಿತು ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಾಕ್ರಮ ನಡೆಯಿತು. ದಾನಿಗಳಿಂದ’ ಗ್ರಾಮ ಪಂಚ್ಯಾತ ವತಿಯಿಂದ ಸಿಹಿ ತಿಂಡಿ ವಿತರಿಸಲಾಯಿತು. ಶಿಕ್ಷಕಿಯರಾದ ಶ್ರೀಮತಿ ನಮಿತಾ ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ವಿದ್ಯಾ ಧನ್ಯವಾದ ಸಮರ್ಪಣೆ ಮಾಡಿದರು.