ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಯ ಎನ್. ಎಸ್.ಎಸ್. ಹಿರಿಯ ಸ್ವಯಂ ಸೇವಕರ ಸಂಘದ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ ವತಿಯಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸಂಘದ ಪ್ರಥಮ ತೈಮಾಸಿಕ ಸಭೆ ಅರಂಬೂರಿನ “ವಿಕಸನ” ಮನೆಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.















ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರು, ಕೆ ವಿ ಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದ ಬಾಲಕೃಷ್ಣ ಗೌಡ ಬೊಳ್ಳೂರು, ಗೌರವ ಸಲಹೆಗಾರರುಗಳಾದ ಕೆವಿಜಿ ಪಾಲಿಟೆಕ್ನಿಕ್ ನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ್ ಸಿ ಬಿಳಿನೆಲೆ, ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ಎನ್ನೆಂಸಿಯ ಸಹಾಯಕ ಪ್ರಾಧ್ಯಾಪಕರಾದ ಡಾ| ಅನುರಾಧಾ ಕುರುಂಜಿ, ಇವರುಗಳನ್ನು ಗೌರವಿಸುವ ಮೂಲಕ ಗುರುವಂದನಾ ಕಾರ್ಯಕ್ರಮವನ್ನು ಆಚರಿಸಲಾಯಿತು.
ಪ್ರಸ್ತುತ ವರ್ಷ ಸಂಘವು ದಶಮಾನೋತ್ಸವವನ್ನು ಆಚರಿಸುತ್ತಿದ್ದು, ಸಂಘದ ಪ್ರಥಮ ತೈಮಾಸಿಕ ಸಭೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಅಧ್ಯಕ್ಷರಾದ ರಕ್ಷಿತ್ ಬೊಳ್ಳೂರು, ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ.ಎಸ್, ಕಾರ್ಯದರ್ಶಿ ಸುಶಾಂತ್ ಅಜ್ಜಿಕಲ್ಲು, ಯಶವಂತ, ಯೂರೇಶ್ ಕೊಪ್ಪಡ್ಕ, ಪೂರ್ಣಿಮ ಚೊಕ್ಕಾಡಿ, ಲೋಹಿತ್ ರೆಂಜಾಳ, ಚರಿತ್ ರೈ, ಅಚಲ್ ಬಿಳಿನೆಲೆ, ಅಂಶಲ್ ಬಿಳಿನೆಲೆ ಮೊದಲಾದವರು ಉಪಸ್ಥಿತರಿದ್ದರು.










