














ಸುಳ್ಯ ತಾಲೂಕಿನ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ (ಆದಿದ್ರಾವಿಡ ) ಸಮುದಾಯದವರು ಆರಾಧಿಸಿಕೊಂಡು ಬರುವ ಶ್ರೀ ಮಹಮ್ಮಾಯಿ ಹಾಗೂ ಶ್ರೀ ಸತ್ಯಸಾರಮಾಣಿ (ಸತ್ಯ ಪದ್ನಾಜಿ) ಹಾಗೂ ಸಪರಿವಾರ ದೈವಗಳ ದೈವಸ್ಥಾನಗಳು ಇದ್ದು ಹೆಚ್ಚಿನ ಕಡೆಗಳಲ್ಲಿ ಸದ್ರಿ ದೈವಸ್ಥಾನಗಳ ದಾಖಲೆ ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಹಾಗೂ ಈ ದೈವಸ್ಥಾನ ಪುರಾತನ ಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿರುವ ದೈವಸ್ಥಾನಗಳಾಗಿದ್ದು ಇಂತಹ ದೈವಸ್ಥಾನಗಳ ವಿವರಗಳನ್ನು ತಹಶೀಲ್ದಾರ್ ರವರಿಗೆ ನೀಡಲಾಯಿತು. ಈ ದೈವಸ್ಥಾನದ ವಿವರಗಳನ್ನು ಸರಕಾರದ ಗಮನಕ್ಕೆ ತಂದು ಭೂ ದಾಖಲೆಗಳನ್ನು ನೀಡಲು ವಿನಂತಿ ಮಾಡಲಾಯಿತು.










