ರೋಟರಿ ಕ್ಲಬ್ ಬೆಳ್ಳಾರೆ ಇವರು ಬೆಳ್ಳಾರೆ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಸಮವಸ್ತ್ರವನ್ನು ಆ.15ರಂದು ವಿತರಿಸಿದರು.















ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ ಪೂಜಾರಿ ಕೆ, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್ ರೈ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ, ರೋಟರಿ ಕ್ಲಬ್ ಪೂರ್ವಾಧ್ಯಕ್ಷರುಗಳಾದ ಶಶಿಧರ್ ಬಿ ಕೆ, ರವೀಂದ್ರ ಗೌಡ, ಚಂದ್ರಶೇಖರ ರೈ ಬಜನಿ ಮತ್ತು ಸದಸ್ಯರುಗಳಾದ, ಮುಸ್ತಾಪ ಕೆ. ಎಂ, ನಜಾತ್ ಹನೀಫ್, ಧನರಾಜ್ ಕಲ್ಲೋಣಿ ಅಂಗನವಾಡಿ ಸಹಾಯಕಿ ಶ್ರೀಮತಿ ಸುಜಾತ ಮತ್ತು ಪೋಷಕರು ಉಪಸ್ಥಿತರಿದ್ದರು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ದೇವಿಕಾ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭಾರತಿ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










