ಮೆಸ್ಕಾಂ : ಉಬರಡ್ಕ ಗ್ರಾಮ ಇನ್ನು ಮುಂದೆ ಸುಳ್ಯ ಶಾಖೆ ವ್ಯಾಪ್ತಿಗೆ

0

ಪಿ.ಎಸ್.ಗಂಗಾಧರ್ ಪ್ರಯತ್ನ

ಉಬರಡ್ಕ‌ಮಿತ್ತೂರು ಗ್ರಾಮ ವ್ಯಾಪ್ತಿಯನ್ನು ಸುಳ್ಯ ಮೆಸ್ಕಾಂ ಶಾಖೆಗೆ ಸೇರ್ಪಡಿಸಿ ಮಂಗಳೂರು ವಿದ್ಯುತ್ ಸರಬರಾಜು ‌ಕಂಪೆನಿ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆದೇಶ ‌ಮಾಡಿದ್ದಾರೆ.

2017ರ ವರೆಗೆ‌ ಉಬರಡ್ಕಮಿತ್ತೂರು ಗ್ರಾಮದ ಜನರು ಮೆಸ್ಕಾಂ ಬಿಲ್ ಪಾವತಿ, ದೂರು ಸಲ್ಲಿಕೆ ಇತ್ಯಾದಿಗಳಿಗೆ ಸುಳ್ಯ‌ಮೆಸ್ಕಾಂ ಶಾಖೆಯಲ್ಲಿ ಅವಲಂಬಿಸಬೇಕಾಗಿತ್ತು. ಆದರೆ 2017ರಲ್ಲಿ ಮೆಸ್ಕಾಂ‌ ಜಾಲ್ಸೂರು ಶಾಖೆ ಆದಾಗ ಉಬರಡ್ಕ‌ಮಿತ್ತೂರು ಗ್ರಾಮವನ್ನು ಜಾಲ್ಸೂರು ಶಾಖೆಗೆ ಸೇರಿಸಲಾಗಿತ್ತು.‌ ಉಬರಡ್ಕ‌ಮಿತ್ತೂರು ಗ್ರಾಮದ ಜನರಿಗೆ ಸುಳ್ಯ ಶಾಖೆ ಹತ್ತಿರವಿದ್ದರೂ ಅವರು ಮೆಸ್ಕಾಂ ವಿಚಾರಕ್ಕೆ ಜಾಲ್ಸೂರಿಗೆ ಹೋಗಬೇಕಾಗಿತ್ತು. ಇದು ಜನರಿಗೆ ಸಮಸ್ಯೆ ಎನಿಸಿತ್ತು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ರವರು 2017ರಲ್ಲಿಯೇ ಈ ಕುರಿತು ಮೆಸ್ಕಾಂ ಮೇಲಧಿಕಾರಿಗಳಿಗೆ ಮನವಿ ಮಾಡಿ ಉಬರಡ್ಕವನ್ನು ಸುಳ್ಯ ಶಾಖೆಗೇ ಸೇರಿಸಬೇಕೆಂದು ಒತ್ತಾಯಿಸಿದ್ದರು. ಆ ಬಳಿಕ ಉಬರಡ್ಕದಲ್ಲಿ ನಡೆದ ಎಲ್ಲ ಗ್ರಾಮ ಸಭೆಯಲ್ಲಿಯೂ ಅವರು ಈ‌ಬಗ್ಗೆ ಮೆಸ್ಕಾಂ ಇಂಜಿನಿಯರ್ ಗೆ ಒತ್ತಾಯಿಸಿದ್ದರು.‌ಅವರ ಮಾತಿಗೆ ಗ್ರಾಮಸ್ಥರು ಕೂಡಾ ಧ್ವನಿಗೂಡಿಸಿದ್ದರು.

ರಾಜ್ಯದಲ್ಲಿ ಎರಡು‌ವರ್ಷಗಳ ಹಿಂದೆ‌ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ‌ ಬಂದ‌ ಬಳಿಕ ಪಿ.ಎಸ್.ಗಂಗಾಧರ್ ರವರು ರಾಜ್ಯದ ಅಧಿಕಾರಿಗಳನ್ನು ಸಂಪರ್ಕ ಮಾಡಿ ಸಮಸ್ಯೆ ವಿವರಿಸಿದ್ದರು. ಅವರಿಗೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿಯವರು ಸಹಕಾರ ನೀಡಿದ್ದರು.

ಇದೀಗ ಆ.20ರಂದು‌ಈ‌ ಕುರಿತು ಆದೇಶ ಮಾಡಲಾಗಿದ್ದು ಇನ್ನು ಮುಂದೆ ಉಬರಡ್ಕ‌ಮಿತ್ತೂರು ಗ್ರಾಮವನ್ನು‌ ಸುಳ್ಯ ಮೆಸ್ಕಾಂ ಶಾಖೆಯಲ್ಲಿ ಸೇರ್ಪಡೆ ಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.