ಕೇಸು ದಾಖಲು
ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಕಂಡಕ್ಟರ್ ರೊಬ್ಬರ ಮೇಲೆ ಮೂರು ಮಂದಿ ಬಂದು ಹಲ್ಲೆ ನಡೆಸಿದ ಘಟನೆ
ಆ.18 ರಂದು ಸಂಜೆ ವರದಿಯಾಗಿದೆ.
ಸುಳ್ಯದಿಂದ ಬಂದಡ್ಕ ಕಡೆಗೆ ಸರ್ವಿಸ್ ಹೋಗುತ್ತಿರುವ ಗುರೂಜಿ ಟ್ರಾವೆಲ್ಸ್ ನ ಬಸ್ ಕಂಡಕ್ಟರ್ ನಂದಕಿಶೋರ್
ಹಲ್ಲೆಗೊಳಗಾದ ಯುವಕ.















ಗುರೂಜಿ ಬಸ್ಸಿನಲ್ಲಿ ಹಿಂದೆ ಚಾಲಕನಾಗಿದ್ದ ನಾಗರಾಜ ತನ್ನ ಗೆಳೆಯರಾದ ಮಧುಪ್ರಸಾದ್ ಮತ್ತು
ಶ್ರೀಜಿತ್ ಎಂಬವರ ಜತೆ ಬಂದು ಕಂಡಕ್ಟರ್ ನಂದಕಿಶೋರನನ್ನು
ಬಸ್ಸಿನಿಂದ ಎಳೆದು ಹಾಕಿ ಹಲ್ಲೆ ನಡೆಸಿರುತ್ತಾರೆ.
ನಾಗರಾಜರವರು ಗುರೂಜಿ ಬಸ್ಸಿನಲ್ಲಿ ಸುಮಾರು 3 ವರ್ಷಗಳಿಂದ ಚಾಲಕರಾಗಿದ್ದು ಕಳೆದ 1 ವರ್ಷಗಳ ಹಿಂದೆ ಕಾರಣಾಂತರಗಳಿಂದ ಕೆಲಸ ಬಿಟ್ಟಿದ್ದರು. ಅವರು ಈಗ ಬಂದಡ್ಕದಲ್ಲಿ ವಾಸವಾಗಿದ್ದು ಆ. 18 ರಂದು ಅವರ ಪತ್ನಿ ಬಸ್ಸಿನಲ್ಲಿ ಸುಳ್ಯಕ್ಕೆ ಬರುವಾಗ ಕಂಡಕ್ಟರ್ ನಂದ ಕಿಶೋರ್ ರವರು ಹಣ ಕೇಳಿ ಪಡೆದು ಟಿಕೆಟ್ ನೀಡಿದ್ದಾರೆ ಎಂಬ ಕಾರಣಕ್ಕೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ದೂರಿ ನಲ್ಲಿ ಉಲ್ಲೇಖಸಿರುತ್ತಾರೆ.
ನಾಗರಾಜ್ ರವರು ಚಾಲಕರಾಗಿದ್ದ ಸಮಯದಲ್ಲಿ ಅವರ ಮನೆಯವರು ಬಸ್ಸಿನಲ್ಲಿ ಬರುವಾಗ ಟಿಕೆಟ್ ನೀಡುತ್ತಿರಲಿಲ್ಲ. ಈಗ ಕೆಲಸದಿಂದ ಬಿಟ್ಟದ್ದರಿಂದ ಟಿಕೆಟ್ ನೀಡಿರುವ ಕಾರಣ ಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂದು ಬಸ್ಸಿನ ಮಾಲಕರಾದ ಮೋಹನ್ ಮತ್ತು ಚಂದ್ರಶೇಖರ ರವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.










