ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ತಂಡದಿಂದ ಮರಕತದಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಶೇಖರಿಷಲ್ಪಟ್ಟ ಮರದ ದಿಮ್ಮಿಗಳನ್ನು ಆ 20 ರಂದು ತೆರವು ಮಾಡಲಾಯಿತು.















ಮಳೆಗೆ ಭಾರಿ ಗಾತ್ರದ ಮರಗಳು ಬಂದು ಅಡ್ಡಲಾಗಿ ನಿಂತು ಸಮಸ್ಯೆಯಾಗಿರುವ ಬಗ್ಗೆ ಗಮನ ಹರಿಸಿದ ವಿಪತ್ತು ನಿರ್ವಹಣಾ ಅದನ್ನು ಅರಣ್ಯ ಇಲಾಖೆಯ ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ ತೆರವುಗೊಳಿಸುವ ಕಾರ್ಯ ಮಾಡಲಾಯಿತು.
ಈ ಸಂಧರ್ಭ ತಾಲೂಕಿನ ಕೃಷಿ ಅಧಿಕಾರಿಗಳು ಹಾಗೂ ವಲಯ ಮೇಲ್ವಿಚಾರಕರು ಭೇಟಿ ನೀಡಿದರು.

ಸುಬ್ರಹಣ್ಯ ಗ್ರಾಮ ಪಂಚಾಯತ್‌ಸದಸ್ಯರಾದ ದಿಲೀಪ್ ಉಪ್ಪಳಿಕೆ ಉಪಸ್ಥಿತರಿದ್ದರು. ವಿಪತ್ತು ಪಡೆಯ ಸತೀಶ್ ಬಂಬುಳಿ, ಹರಿಶ್ಚಂದ್ರ ಕುಳ್ಳoಪ್ಪಾಡಿ, ಲೋಹಿತ್ ಚೆಮ್ಮೂರು, ಅಶ್ವಥ್ ಚೆಮ್ಮೂರು, ದೀಪಕ್ ಕುಂಭಡ್ಕ, ಪ್ರಜ್ವಲ್ ಕುಂಭಡ್ಕ, ಚಂದ್ರಶೇಖರ ಗುಡ್ಡೆಮನೆ, ಕಾರ್ತಿಕ್ ಅಮೆ, ಮೋಹನ್ ಕುಂಟುಮಾಯ, ಮುರಳಿ ಗುತ್ತಿಗಾರು, ಧರ್ಮಪಾಲ ಮರಕತ ಮತ್ತಿತರರು ಸಕ್ರೀಯರಾಗಿ ಕೆಲಸ ಮಾಡಿ ಸಹಕರಿಸಿದರು.










