2026-27 ರ ಶೈಕ್ಷಣಿಕ ವರ್ಷಕ್ಕೆ 11 ನೇ ತರಗತಿ ನವೋದಯ ವಿದ್ಯಾಲಯ ಪ್ರವೇಶಾತಿಗಾಗಿ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿ. ಎಂ. ಶ್ರೀ ಜವಾಹರ ನವೋದಯ ವಿದ್ಯಾಲಯ ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಇಲ್ಲಿ 6ರಿಂದ 12 ನೇ ತರಗತಿಯವರೆಗೆ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಮುಖಾಂತರ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಸತಿಯ ಜೊತೆಗೆ ಉಚಿತ, ಉತ್ಕೃಷ್ಟ ಸೌಲಭ್ಯಗಳನ್ನೊಳಗೊಂಡ ಮೌಲ್ಯಾಧಾರಿತ ಶಿಕ್ಷಣ ದೊರೆಯುತ್ತದೆ. ಭಾರತದದ್ಯಂತ 653 ನವೋದಯ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುಡಿಪು ಎಂಬ ಗ್ರಾಮದಲ್ಲಿ ಅಸ್ತಿತ್ವದಲ್ಲಿ ಇರುವ ವಿದ್ಯಾಲಯಕ್ಕೆ ಆಯ್ಕೆಯಾಗಲು ಬಯಸುವ ಕೇಂದ್ರ ಅಥವಾ ರಾಜ್ಯ ಸರಕಾರದ ಪರೀಕ್ಷೆ ಮಂಡಳಿಯಲ್ಲಿ 2025-26 ನೇ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ 11ನೇ ತರಗತಿಗೆ ವಿಜ್ಞಾನ ವಿಭಾಗದಲ್ಲಿ ಅನಿರ್ದಿಷ್ಟ ಸಂಖ್ಯೆಗೆ ಖಾಲಿಯಾಗುವ ಸೀಟುಗಳಿಗೆ ಪ್ರವೇಶಾತಿಗಾಗಿ ವಿದ್ಯಾರ್ಥಿಗಳಿoದ ಅರ್ಜಿ ಆಹ್ವಾನಿಸಲಾಗಿದೆ. ಈ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕು.















ಅರ್ಜಿ ಹಾಕಲು ಕಡೆಯ ದಿನಾಂಕ 23.09.2025.
ಪರೀಕ್ಷೆ ನಡೆಯುವ ದಿನಾಂಕ 07.02.2026. ಆಯಾ ನಿಗದಿಪಡಿಸಿದ ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ.
ಆನ್ಲೈನ್ ಮುಖಾಂತರ
ಆನ್ಲೈನ್ ಮುಕಾಂತರ ಅರ್ಜಿ ಹಾಕುವ ವಿಳಾಸ. www.navodaya.gov.in
ಒಂದು ವೇಳೆ ಆನ್ಲೈನ್ ಮುಖಾಂತರ ಅರ್ಜಿ ಹಾಕಲು ಸಾಧ್ಯವಿಲ್ಲವಾದರೆ ಭರ್ತಿ ಮಾಡಿದ ಅರ್ಜಿಯನ್ನು ವಿದ್ಯಾಲಯಕ್ಕೆ ತಲುಪಿಸಬೇಕೆಂದು ಈ ಮೂಲಕ ಕೋರಲಾಗಿದೆ.



