ಬೆಳ್ಳಾರೆಯ ಗ್ಲೋಬಲ್ ಸರ್ವೇಲೆನ್ಸ್ ಸಿಸ್ಟಮ್ ಐದನೇ ವರ್ಷಕ್ಕೆ ಪಾದಾರ್ಪಣೆ

0

ಅರಿಕೋಡಿ ಧರ್ಮದರ್ಶಿಯವರಿಂದ ಶುಭನುಡಿ

ಬೆಳ್ಳಾರೆಯ ಅನ್ನಪೂರ್ಣ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಗ್ಲೋಬಲ್ ಸರ್ವೆಲೆನ್ಸ್ ಸಿಸ್ಟಮ್ (ಸಿಸಿ ಕ್ಯಾಮರಾಗಳ ಮಳಿಗೆ) ಯಶಸ್ವಿ 5ನೇ ವರ್ಷಕ್ಕೆ ಪಾದಾರ್ಪಣೆ ಗೊಂಡಿದ್ದು, ಇದರ ಪ್ರಯುಕ್ತ ಸಂಸ್ಥೆಯಲ್ಲಿ ಬೆಳಗ್ಗೆ ಗಣಪತಿ ಹೋಮ ಮತ್ತು ಸಹಕರಿಸಿದವರಿಗೆ ಕೃತಜ್ಞತೆ ಸಮಾರಂಭ ಆ. 21ರಂದು ನಡೆಯಿತು.

ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಗೌಡರವರು ಸಂಸ್ಥೆಗೆ ಭೇಟಿ ನೀಡಿ ಶುಭ ನುಡಿಗಳನ್ನಾಡಿ ಸಂಸ್ಥೆಯ ಮಾಲಕರನ್ನು ಮತ್ತು ಸಿಬ್ಬಂದಿ ವರ್ಗದವರನ್ನು ಹರಸಿದರು.

ಸಂಸ್ಥೆಯ ವತಿಯಿಂದ ಮಾಲಕ ರಾಕೇಶ್ ರೈ ಮತ್ತು ಅವರ ಪತ್ನಿ ಶ್ರೀಮತಿ ಅಕ್ಷತಾ ರೈ, ಸಿಬ್ಬಂದಿ ವರ್ಗ ಧರ್ಮದರ್ಶಿಯವರನ್ನು ಫಲ ಪುಷ್ಪ ಶಾಲು ಪೇಟ ಹಾರ ಹಾಕಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಹಕಾರಿ ಧುರೀಣ ಕೂಸಪ್ಪ ಗೌಡ ಮುಗುಪ್ಪು, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಪ್ರೇಮ್ ಬೆಳ್ಳಾರೆ, ಮಂಜುನಾಥ ಮಡ್ತಿಲ, ರಮೇಶ್ ಗೌಡ, ಸಂತೋಷ್,ಮೋಹನ್ ಗೌಡ, ಯತಿನ್ ಬಿರ್ವ, ರವೀಂದ್ರ ಬಿರ್ವ, ನಾಗೇಶ್ ಬಿರ್ವ, ಅಶೋಕ್ ರೈ, ಪದ್ಮನಾಭ ಪಾಟಾಳಿ, ಲತಾ ಶೆಟ್ಟಿ ಸರಯೂ ಬ್ಯೂಟಿ ಪಾರ್ಲರ್, ರಾಜೇಶ್ ರೈ ಎಸ್.ಎ ಸ್ಟೋರ್, ಪ್ರಮೋದ್ ರೈ ಕಲಾ ಮಂದಿರ್, ಲಹರಿ ಈಶ್ವರ್ ಭಟ್ ಸೇರಿದಂತೆ ಹಿತೈಷಿಗಳು ಭಾಗವಹಿಸಿದ್ದರು.

ಸಂಸ್ಥೆಯ ಮಾಲಕ ರಾಕೇಶ್ ರೈ ಸರ್ವರನ್ನು ಸ್ವಾಗತಿಸಿದರು.