














ಅಮೃತೇಶ್ವರಿ ಸ್ವ ಸಹಾಯ ಸಂಘವು 26 ವರ್ಷ ಪೂರೈಸಿದ ಪ್ರಯುಕ್ತ ರಾಮೇಶ್ವರ ಯಾತ್ರೆ ಹಮ್ಮಿಕೊಳ್ಳಲಾಯಿತು ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನದ ಮುಂದೆ ಚಾಲನೆ ಕೊಡಲಾಯಿತು.
ಈ ವೇಳೆ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕುಸುಮಾಧರ ಕರಿಮಜಲು, ಊರವರು ಉಪಸ್ಥಿತರಿದ್ದರು ಪ್ರಯಾಣಕ್ಕೆ ಶುಭ ಹಾರೈಸಿದರು
ಈ ತೀರ್ಥಯಾತ್ರೆಯಲ್ಲಿ ಕುದ್ಕುಲಿ ಕುಟುಂಬಸ್ಥರು ಮತ್ತು ಸ್ನೇಹಿತರು, ಅಳ್ಪೆ ಕೋಡಿ ಕುಟುಂಬಸ್ಥರು, ಮುಡೂರು ಕುಟುಂಬಸ್ಥರು ಮತ್ತು ಚಿಂಗಾಣಿಗುಡ್ಡೆ ದೈವಸ್ಥಾನದ ಪ್ರಧಾನ ದೈವ ನರ್ತಕರು ಭಾಗಿಗಳಾಗಿದ್ದಾರೆ. ಮಧುರೈ ಮೀನಾಕ್ಷಿ ಅಮ್ಮನವರ ದೇವಸ್ಥಾನ ಮತ್ತು ರಾಮೇಶ್ವರ ದೇವಸ್ಥಾನ ಹಾಗೂ ಧನುಷ್ಕೋಡಿಯ (ರಾಮಸೇತು ಪ್ರಾರಂಭವಾಗುವ ಪುಣ್ಯಸ್ಥಳ) ದರ್ಶನ ಪಡೆಯಲಿದ್ದಾರೆ.










