ಐವರ್ನಾಡು ಗ್ರಾಮದ ಕುಂಞಮೂಲೆ ಪ್ರಭಾಕರ ರಾವ್ ರವರು ಆ.09 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠಸಮಾರಾಧನೆ ಕಾರ್ಯಕ್ರಮವು ಆ.22 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
















ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ ಮತ್ತು ವಿಶ್ವನಾಥ ರೈ ಕಳಂಜ ರವರು ದಿ.ಪ್ರಭಾಕರ ರಾವ್ ರವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನರು ದಿ.ಪ್ರಭಾಕರ ರಾವ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಶಾಂತಾ, ಪುತ್ರ ನ್ಯಾಯವಾದಿಯಾಗಿರುವ ಪ್ರಶಾಂತ್ ,ಸೊಸೆ ಶ್ರೀಮತಿ ಪರಿಮಳ ರಾವ್,ಮೊಮ್ಮಗಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.










