
ಕೆವಿಜಿ ಕಾನೂನು ಕಾಲೇಜಿನಲ್ಲಿ ದಿ. ಶ್ರೀಮತಿ ಜಾನಕಿ ವೆಂಕಟರಮಣ ಗೌಡರ 13 ನೆ ವರ್ಷದ ಪುಣ್ಯಸ್ಮರಣೆ ಆ. 22ರoದು ಕೆವಿಜಿ ಕಾನೂನು ಕಾಲೇಜಿನಲ್ಲಿ ನಡೆಯಿತು. ಈ ಸಂಧರ್ಭ ದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಆಡಳಿತ ಸದಸ್ಯರಾದ ಜಗದೀಶ್ ಅಡ್ತಲೆ, ಕಾಲೇಜಿನ ಆಡಳಿತಧಿಕಾರಿ ಪ್ರೊ. ಕೆ.ವಿ ದಾಮೋದರ ಗೌಡ ದಿ. ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ವಿದ್ಯಾಸಂಸ್ಥೆಗಳ ಬೆಳವಣಿಗೆಯಲ್ಲಿ ದಿ. ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡರ ಕೊಡುಗೆಯನ್ನು ಸ್ಮರಿಸಿದರು.















ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲಾರದ ಶ್ರೀಮತಿ ಟೀನಾ ಎಚ್.ಎಸ್., ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










