














ಒಕ್ಕಲಿಗ ಗೌಡ ಸೇವಾ ಸಂಘ ಕಡಬ ಇದರ ಆಶ್ರಯದಲ್ಲಿ ಎಡಮಂಗಲ ಗ್ರಾಮದಲ್ಲಿ ಶ್ರೀ ಷಣ್ಮುಖ ನೂತನ ಸ್ವಸಹಾಯ ಸಂಘ ಆ. 22ರಂದು ಎಡಮಂಗಲ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ರಚನೆಗೊಂಡಿತು.
ಊರ ಗೌಡರಾದ ಎಲ್ಯಣ್ಣ ಗೌಡ ಸಂಘವನ್ನು ಉದ್ಘಾಟಿಸಿದರು. ಶೇಖರ ಗೌಡ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ನಿರ್ದೇಶಕರಾದ ಬಾಲಕೃಷ್ಣ ಕೊಲ್ಪೆ, ಬಾಲಕೃಷ್ಣ ಗೌಡ ಹೇಮಳ ಉಪಸ್ಥಿತರಿದ್ದರು. ಒಕ್ಕಲಿಗ ಸಂಘದ ಸಂಯೋಜಕರಾದ ಅಶೋಕ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಪ್ರಬಂಧಕರಾಗಿ ಹರೀಶ್ ನಡುಬೈಲು, ಸಂಯೋಜಕರಾಗಿ ಅಶೋಕ್ ಮಣಿಲ ಆಯ್ಕೆಯಾದರು. ಪ್ರೇರಕ ಜನಾರ್ಧನ ಪಾಡ್ಲ ಕಾರ್ಯಕ್ರಮ ನಿರೂಪಿಸಿದರು.










