ತೊಡಿಕಾನ ಗ್ರಾಮದ ನೀರಿನ ಸಂಪರ್ಕ ಇರುವ ಮನೆಗಳಿಗೆ 24/7 ನೀರಿನ ಸರಬರಾಜು ವ್ಯವಸ್ಥೆಗೆ ಕ್ರಮ
ಬೆಂಕಿಗೆ ಆಹುತಿಯಾದ ಸ್ವಚ್ಛತಾ ಘಟಕ ಪುನರ್ ನಿರ್ಮಾಣಕ್ಕೆ ಗೌರವ ಧನ ನೀಡಲು ಸದಸ್ಯರ ಒಮ್ಮತ ನಿರ್ಧಾರ
ಆರಂತೋಡು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ಆ. 22 ರ0ದು ನಡೆಯಿತು.
ಸಭೆಯಲ್ಲಿ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲಿಂದಾದ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವ ಆಶಯದಂತೆ ಅರಂತೋಡು ಗ್ರಾಮ ಪಂಚಾಯತ್. ವ್ಯಾಪ್ತಿಯ ಅವಳಿ ಗ್ರಾಮಗಳಲ್ಲಿ ಒಂದಾದ ತೊಡಿಕಾನ ಗ್ರಾಮದ ನೀರಿನ ಸಂಪರ್ಕವಿರುವ ಮನೆಗಳಿಗೆ 24/7 ನೀರಿನ ಸರಬರಾಜು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಅದಕಾಗಿ ಸಂಪರ್ಕವಿರುವ ಮನೆಗಳ ನೀರಿನ ಕೆಟ್ಟುಹೋಗಿರುವ ಮೀಟರ್ಗಳನ್ನು ಮನೆಯವರ ಶೇ 50ರ ಸಹಕಾರ ದಿಂದ ಬದಲಾವಣೆ ಮಾಡಲು ತೀರ್ಮಾನಿಸಲಾಯಿತು.















ಬೆಂಕಿಗೆ ಆಹುತಿಯಾದ ಮಾದರಿ ಘನ ತ್ಯಾಜ ಘಟಕದ ಪುನರ್ ನಿರ್ಮಾಣಕ್ಕೆ ಸದಸ್ಯರು ತಮ್ಮ ಗೌರವಧನ ಕೊಡಲು ಸರ್ವಾನುಮತದಿಂದ ತೀರ್ಮಾನಿಸಿದರು.
ಪಂಚಾಯಿತಿನ ಮಹತ್ವಾಕಾಂಕ್ಷಿ ಯೋಜನೆಯೊಂದಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮದ 75ತಿಂಗಳ ಕಾರ್ಯಕ್ರಮ ಮಾಡುವುದರ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಮತ್ತು ಹದಗೆಟ್ಟಿರು ರಸ್ತೆ ದುರಸ್ಥಿ, ಬೀದಿ ದೀಪಗಳ ದುರಸ್ಥಿ. ಬಗ್ಗೆ ಕ್ರಮ ಕೈ ಗೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಭವಾನಿ ಚಿಟ್ಟನೂರ್, ಸದಸ್ಯರಾದ ವೆಂಕಟ್ರಮಣ ಪೆತ್ತಾಜೆ, ರವೀಂದ್ರ ಪೂಜಾರಿ ಪಂಜಿಕೋಡಿ, ಗಂಗಾಧರ ಗುಂಡ್ಲ ಬನ, ಪುಷ್ಪಾದರ ಕೊಡಂಕೇರಿ, ಸುಜಯ ಮೇಲೆಡ್ತಲೆ, ಹರಿಣಿ ದೇರಾಜೆ, ಮಾಲಿನಿ ಉಳುವಾರು, ಶ್ವೇತಾ ಅರಮನೆಗಯ, ಸರಸ್ವತಿ ಬಿಳಿಯಾರು ಭಾಗವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್. ಎಂ. ಆರ್. ಸ್ವಾಗತಿಸಿ ಸರಕಾರದ ಸುತ್ತೋಲೆಗಳನ್ನು ಮಂಡಿಸಿದರು. ಪಂಚಾಯತ್ ಸಿಬ್ಬಂದಿಗಳು ಮತ್ತು ಸ್ವಚ್ಛತಾ ಘಟಕದ ಸಿಬ್ಬಂದಿಗಳು ಸಹಕರಿಸಿದರು.










