ಸುಳ್ಯ ಶ್ರೀ ಶಾರದಾಂಬಾ ಮಹಿಳಾ ಸಮಿತಿಯ ಪೂರ್ವಭಾವಿ ಸಭೆ

0

ಸುಳ್ಯ ದಸರಾ ೨೦೨೫ರ ಉತ್ಸವವು ಸೆ. ೨೯ರಿಂದ ಆರಂಭಗೊಳ್ಳಲಿದ್ದು, ಇದರ ಪೂರ್ವಭಾವಿ ಸಭೆಯು ಆ. ೨೨೩ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಸಭೆಯಲ್ಲಿ ದಸರಾ ಉತ್ಸವದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಬಗ್ಗೆ, ಸಭೆಯಲ್ಲಿ ತೀರ್ಮಾನಿಸಲಾಯಿತು. ನಂತರ ಮಹಿಳಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶಾರದಾಂಬಾ ಮಹಿಳಾ ದಸರಾ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಲತಾ ಮಧುಸೂದನ್, ಗೌರವಾಧ್ಯಕ್ಷರಾಗಿ ಶ್ರೀಮತಿ ಯಶೋಧಾ ರಾಮಚಂದ್ರ, ಕಾರ್ಯದರ್ಶಿಯಾಗಿ ಶ್ರೀಮತಿ ಶ್ವೇತಾ ಪ್ರಶಾಂತ್, ಜೊತೆಕಾರ್ಯದರ್ಶಿಯಾಗಿ ಶ್ರೀಮತಿ ರೋಹಿಣಿ ಕಲ್ಲುಗದ್ದೆ, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಚಂದ್ರಾಕ್ಷಿ ರೈ, ಶ್ರೀಮತಿ ಜಯಕೃಷ್ಣ ಕಾಯರ್ತೋಡಿ, ಶ್ರೀಮತಿ ಆರತಿ ಪುರುಷೋತ್ತಮ, ಶ್ರೀಮತಿ ಶಿಲ್ಪಾ ಸುದೇವ್, ಶ್ರೀಮತಿ ಸುನಂದಾ ದೇವಸ್ಯ, ಶ್ರೀಮತಿ ಭಾರತಿ ಕಾಂತಮಂಗಲ, ಶ್ರೀಮತಿ ಸುಜಾತಾ ರೈ, ಶ್ರೀಮತಿ ಮಮತಾ ಶೆಣೈ, ಶ್ರೀಮತಿ ಸರಸ್ವತಿ ಮಾಧವ, ಶ್ರೀಮತಿ ಹರಿಣಿ ಬೂಡು, ಶ್ರೀಮತಿ ರಶ್ಮಿ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಾನಪದ ಗೀತೆ, ದೇಶೀ ಆಟಗಳು, ಹೂವಿನ ಅಲಂಕಾರ ಸ್ಪರ್ಧೆ, ಒನ್ ಮಿನಿಟ್ ಆಟಗಳು, ಹೀಗೇ ಹಲವಾರು ಆಟಗಳನ್ನು ಆಡಿಡುವ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಲಾಯಿತು.