ಮರ್ಕಂಜದಲ್ಲಿ ಸುಳ್ಯ ಹಬ್ಬ ಸಮಿತಿ ಸಭೆಯು ಆ.23ರಂದು ರೆಂಜಾಳದ ಶ್ರೀ ವಿನಾಯಕ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ ವಹಿಸಿದ್ದರು.
ಸುದ್ದಿ ಕಚೇರಿ ವ್ಯವಸ್ಥಾಪಕರಾದ ಯಶ್ವಿತ್ ಕಾಳಮ್ಮನೆ ಸಭೆ ಗ್ರಾಮದ ದಾಖಲೀಕರಣದ ಬಗ್ಗೆ ಮಾಹಿತಿ ನೀಡಿದರು.















ಸಭೆಯಲ್ಲಿ ಗೌರವಧ್ಯಕ್ಷ ಅಚ್ಚುತ ಮಾಸ್ತರ್ ತೀರ್ಥಮಜಲು, ಪ್ರಧಾನ ಕಾರ್ಯದರ್ಶಿ ಲತಾ ಚೆನ್ನಕೇಶವ, ಕೋಶಾಧಿಕಾರಿ ದಾಮೋದರ ಪಾಟಾಲಿ ಮಿತ್ತಡ್ಕ ಹಾಗೂ ಸದಸ್ಯರಾದ ಬಾಲಕೃಷ್ಣ ಜೋಗಿಮೂಲೆ, ಸುದ್ದಿ ಬಿಡುಗಡೆ ಪ್ರಕಾಶಕ ಕುಶಾಂತ್ ಮರಕ್ಕಡ, ಊರ ಪ್ರಮುಖರಾದ ಸತೀಶ್ ರಾವ್ ದಾಸರಾಬೈಲು, ಪುಟ್ಟಣ್ಣ ಗೌಡ ಬಾನೂರು, ದಿನೇಶ್ ಕೊರತೋಡಿ, ನಾರಾಯಣ ನಾಯ್ಕ ಅಜ್ಜಿಕಲ್ಲು, ಶ್ರೀನಿವಾಸ ರಾವ್ ದೇಶಕೋಡಿ, ಮಂಜಪ್ಪ ಗೌಡ ಕಾಡುತೋಟ, ಕೇಶವ ಜೋಗಿಮೂಲೆ, ಚಿನ್ನಪ್ಪ ಗೌಡ ಬೇರಿಕೆ ಉಪಸ್ಥಿತರಿದ್ದರು.
ಸುದ್ದಿ ವರದಿಗಾರ ದಯಾನಂದ ಕೊರತ್ತೋಡಿ ಸ್ವಾಗತಿಸಿ, ವಂದಿಸಿದರು.
ಸಭೆಯಲ್ಲಿ ಆ. 27ರಂದು ದಾಖಲೀಕರಣಕ್ಕೆ ಚಾಲನೆ ನೀಡುವುದು ಮತ್ತು ಆಯುರ್ವೇದ ಕ್ಯಾಂಪ್ ಮಾಡುವುದೆಂದು ತೀರ್ಮಾನಿಸಲಾಯಿತು.










