ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಅಮೃತ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಅಭಿಯಾನ

0

ಸುಳ್ಯ ತಾಲೂಕು ಅಂಬ್ಯುಲೆನ್ಸ್ ಚಾಲಕ ಮಾಲಕ ಸಂಘ ಹಾಗೂ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಸದಸ್ಯರು ಭಾಗಿ

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಅಮೃತ ಮಹೋತ್ಸವದ ಅಂಗವಾಗಿ ಶಾಲಾ ಪರಿಸರದ ಸ್ವಚ್ಛತಾ ಅಭಿಯಾನದ 4 ನೇ ವಾರದ ಶ್ರಮದಾನ ಆ. 24 ರಂದು ನಡೆಯಿತು.

ಶಾಲಾ ಪರಿಸರ ಸ್ವಚ್ಛತೆ, ಕಾಡು ಬಳ್ಳಿಗಳ ತೆರವು ಕಾರ್ಯಕ್ರಮ, ಹಾಗೂ ವಿದ್ಯಾರ್ಥಿಗಳಿಂದ ಹಳೆ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಣೆ ಮತ್ತು ದಾಖಲಿ ಸುವ ಕಾರ್ಯಗಳು ಶ್ರಮದಾನ ಮೂಲಕ ನಡೆಯಿತು.

ಈ ವಾರದ ಶ್ರಮದಾನದಲ್ಲಿ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಸದಸ್ಯರು ಗಳು, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘ ದ ಸದಸ್ಯರುಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ,ಎಸ್ ಡಿ ಎಂ ಸಿ ಉಪಾಧ್ಯಕ್ಷ ಹಸೈನಾರ್ ಜಯನಗರ,ಎಸ್ ಡಿಎಂಸಿ ಸದಸ್ಯರಾದ ರಮೇಶ್ ಕೊಡಂಕ್ಕೇರಿ, ಆಂಬುಲೆನ್ಸ್ ಸಂಘದ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ, ಉಪಾಧ್ಯಕ್ಷ ಉನೈಸ್ ಪೆರಾಜೆ,ಸದಸ್ಯರುಗಳಾದ ತಾಜು ಟರ್ಲಿ, ಪುನೀತ್ ಸಂಕೇಶ, ಪ್ರಶಾಂತ್, ಹಮೀದ್ ಬೆಳ್ಳಾರೆ,ಹನೀಫ್ ಕೆ ವಿ ಜಿ, ಸಿದ್ದೀಕ್ ಸುಳ್ಯ, ಕೇಶವ,ಮೊದಲಾದವರು, ಶಿಕ್ಷಕಿ ಮಮತಾ, ಹಾಗೂ ದೈಹಿಕ ಶಿಕ್ಷಕ ಯೂಸುಫ್ ಮೊದಲಾದವರು ಭಾಗವಹಿಸಿದರು.

ಈ ಶ್ರಮದಾನ ಕಾರ್ಯಕ್ರಮ ಪ್ರತಿ ಭಾನುವಾರ ನಡೆಯಲಿದ್ದು, ಶ್ರಮದಾನದಲ್ಲಿ ಭಾಗವಹಿಸಲು ಇಚ್ಛೆಸುವ ಸಂಘ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಯ ಅಭಿಮಾನಿಗಳು ಮತ್ತು ಹಳೆ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸುವಂತೆ ಕೇಳಿಕ್ಕೊಂಡರು.