ಅಡ್ಕಾರ್ ಅಕ್ರಮ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಆರೋಪದಡಿ ಆ 24 ರಂದು ನಾಲ್ಕು ಲಾರಿಗಳನ್ನು ಸುಳ್ಯ ಎಸ್ ಐ ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ಸುಳ್ಯ ಪೊಲೀಸರು ವಶ ಪಡಿಸಿ ಕೊಂಡಿರುವುದಾಗಿ ತಿಳಿದು ಬಂದಿದೆ.















ಮಿಂಚುಪದವಿ ನಿಂದ ಸುಳ್ಯಕಡೆ ಬರುತ್ತಿದ್ದ ಲಾರಿಗಳಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸುಳ್ಯ ಪೊಲೀಸರು ಮಾಹಿತಿ ಮೇರೆಗೆ ಲಾರಿಗಳನ್ನು ವಶಪಡಿಸಿದ್ದು ಸುಳ್ಯ ಪೊಲೀಸ್ ಠಾಣೆಗೆ ತಂದು ದೂರು ದಾಖಲಿಸಿ ಕೊಂಡಿರುವುದಾಗಿ ತಿಳಿದು ಬಂದಿದೆ.










