Home Uncategorized ಸುಳ್ಯ ತಾಲೂಕು‌ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ

ಸುಳ್ಯ ತಾಲೂಕು‌ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ

0

ಸಾಧಕರಿಗೆ ಸನ್ಮಾನ- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಆ. 24ರಂದು ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಜ್ಜಾವರ ಇವರ ಅಧ್ಯಕ್ಷತೆಯಲ್ಲಿ ಅಂಬಟೆಡ್ಕದಲ್ಲಿರುವ ಮರಾಟಿ ಸಮಾಜ ಸೇವಾ ಸಂಘದ ಸಭಾಭವನ ಗಿರಿದರ್ಶಿನಿಯಲ್ಲಿ ನಡೆಯಿತು.
ಸಂಘದ ಸ್ಥಾಪಕಾಧ್ಯಕ್ಷ ದೇವಪ್ಪ ನಾಯ್ಕ್ ಹೊನ್ನೇಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.


ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ನೀರಬಿದಿರೆ ವಾರ್ಷಿಕ ವರದಿ ವಾಚಿಸಿದರೆ, ಕೋಶಾಧಿಕಾರಿ ಐತ್ತಪ್ಪ ಎನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಯುವ ವೇದಿಕೆಯ ಕಾರ್ಯದರ್ಶಿ ಮಿಥುನ್ ಶಾಂತಿನಗರ ಯುವ ವೇದಿಕೆಯ ವರದಿ, ಮಹಿಳಾ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಶೋಭ ಬೆಳ್ಳಾರೆ ಮಹಿಳಾ ವೇದಿಕೆಯ ವರದಿ ವಾಚಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮರಾಟಿ ಧಾರ್ಮಿಕ ಚಿಂತನಾ ಸಮಿತಿ ಅಧ್ಯಕ್ಷ ಗೋಪಾಲ ನಾಯ್ಕ ದೊಡ್ಡೇರಿ ಚಿಂತನಾ ಸಮಿತಿ ವತಿಯಿಂದ ಮುದ್ರಣಗೊಳ್ಳಲಿರುವ ಪುಸ್ತಕದ ಬಗ್ಗೆ ಮಾತನಾಡಿದರು. ಇನ್ನೊರ್ವ ಮುಖ್ಯ ಅತಿಥಿಯಾಗಿ ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್ ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಧಾರ್ಮಿಕ ಕ್ಷೇತ್ರದ ಸಾಧಕ ಚಂದ್ರಶೇಖರ ನಾಯ್ಕ ಕಮಿಲ, ಸಂಗೀತ ಕ್ಷೇತ್ರದ ಸಾಧಕ ವಿಜಯಕುಮಾರ್ ಸುಳ್ಯ, ಯಕ್ಷಗಾನ ಕ್ಷೇತ್ರದ ಸಾಧಕ ರಾಮಚಂದ್ರ ನಾಯ್ಕ್ ಎಸ್. ಕ್ರೀಡಾ ಕ್ಷೇತ್ರದ ಸಾಧಕ ಲೋಕೇಶ್ ತಂಟೆಪ್ಪಾಡಿ ಮತ್ತು ಸಮಾಜ ಸೇವೆಗಾಗಿ ಜಯಪ್ರಕಾಶ್ ಕಲ್ಚಾರ್ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿದ್ದ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಭವಾನಿಶಂಕರ ಕಲ್ಮಡ್ಕ ಮತ್ತು ಯುವ ವೇದಿಕೆಯ ಅಧ್ಯಕ್ಷ ಉದಯಕುಮಾರ್ ಮಾಣಿಬೆಟ್ಟು‌ ಸನ್ಮಾನ ಪತ್ರ ವಾಚಿಸಿದರು. 2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವೇದಿಕೆಯಲ್ಲಿದ್ದ ಪ್ರತಿಭಾ ಪುರಸ್ಕಾರದ ವಿವರವನ್ನು ಸಂಘದ ಜತೆ ಕಾರ್ಯದರ್ಶಿ ಪದ್ಮಾವತಿ ಸುಳ್ಯ ವಾಚಿಸಿದರು. ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ ತಲೆಪಲ, ಸಂಘದ ಮಾಜಿ ಅಧ್ಯಕ್ಷ ಡಾ. ರಂಗಯ್ಯ, ಮಾಜಿ ಕೋಶಾಧಿಕಾರಿ ರಘುನಾಥ್ ಜಟ್ಟಿಪಳ್ಳ, ಮಾಜಿ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ಮಹಾಲಿಂಗ ನಾಯ್ಕ್ ಚೊಕ್ಕಾಡಿ, ಶ್ರೀಮತಿ ಕುಸುಮಾ ಜನಾರ್ಧನ್, ಲೋಕೇಶ್ ತೋಟಚಾವಡಿ ಲೋಕಯ್ಯ ನಾಯ್ಕ್ ಆಚಳ್ಳಿ ಸಭಿಕರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಮರಾಟಿ S4 ಬ್ಲಡ್ ಗ್ರೂಪ್ ಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಮುಂದಿನ ವರ್ಷಕ್ಕೆ ಇದೇ ಸಮಿತಿಯನ್ನು ಮುಂದುವರಿಸುವಂತೆ ಸಭೆಯಿಂದ ಅನುಮೋದನೆ ಪಡೆಯಲಾಯಿತು. ಸಂಘದ ಗೌರವಾಧ್ಯಕ್ಷ ಜನಾರ್ಧನ್ ಬಿ. ಕುರುಂಜಿಭಾಗ್, ಉಪಾಧ್ಯಕ್ಷೆ ಶ್ರೀಮತಿ ಸುಲೋಚನ ನಾರಾಯಣ ಕುರುಂಜಿಗುಡ್ಡೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಜನಾರ್ಧನ ನಾಯ್ಕ್ ಕೇರ್ಪಳ, ಶ್ರೀಮತಿ ಶೋಭ ಎ.ಕೆ‌. ನಾಯ್ಕ್ ಚೊಕ್ಕಾಡಿ, ನಿತ್ಯಾನಂದ ಕುಡೆಂಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯ ಸುಭಾಷ್ ಕೇರ್ಪಳ ಪ್ರಾರ್ಥಿಸಿದರು. ಭವಾನಿಶಂಕರ ಕಲ್ಮಡ್ಕ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಜಗದೀಶ್ ಅರಂಬೂರು ವಂದಿಸಿದರು. ಸಂಘಟನಾ ಕಾರ್ಯದರ್ಶಿ ಈಶ್ವರ ವಾರಣಾಶಿ ಕಾರ್ಯಕ್ರಮ ನಿರೂಪಿಸಿದರು.

NO COMMENTS

error: Content is protected !!
Breaking