ಶಾಲಾ ಶಿಕ್ಷಣ ಇಲಾಖೆ ದ.ಕ ಮತ್ತು ಸರಕಾರಿ ಪ್ರೌಢಶಾಲೆ ಗುತ್ತಿಗಾರು ಸುಳ್ಯ ಇದರ ಜಂಟಿ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
















ತಂಡದಲ್ಲಿ ಸಂಭ್ರಮ.ಎ, ಸಾತ್ವಿಕ್. ಕೆ.ಹೆಚ್, ದಿಗಂತ್. ಕಲ್ಲುಗದ್ದೆ, ಜೀವನ್, ಗಗನ್,ಸೋನಿತ್ ರಾಜ್, ಚಿಂತನ್ ಎನ್, ಹಾಶಿರ್, ಅದ್ವೈತ್ ರೈ, ಗಗನ್ ಬದಿಕಾನ, ಯಶ್ವಿತ್. ಎಮ್. ಆಟಗಾರರಾಗಿದ್ದರು. ತಂಡದ ನಾಯಕ ಸಂಭ್ರಮ್.ಎ ಬೆಸ್ಟ್ ಅಟಾಕರ್ ಪ್ರಶಸ್ತಿ ಪಡೆದರೆ ಸಾತ್ವಿಕ್. ಕೆ.ಹೆಚ್. ಬೆಸ್ಟ್ ಸೆಟ್ಟರ್ ಪ್ರಶಸ್ತಿ ಪಡೆದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಂಗನಾಥ್ ತರಬೇತಿ ನೀಡಿದ್ದರು.










