ಸಂಪಾಜೆ ಯಾದವ ಸಭಾ ಪ್ರಾದೇಶಿಕ ಸಮಿತಿ ವಾರ್ಷಿಕ ಮಹಾಸಭೆ

0

ಯಾದವ ಸಭಾ ಸಂಪಾಜೆ ಇದರ ವಾರ್ಷಿಕ ಸಭೆಯು ಇದರ ಅಧ್ಯಕ್ಷರಾದ ನಾರಾಯಣ ಬಾಲೆಂಬಿ ನೇತೃತ್ವದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಯಾದವ ಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ವಿ.ವಿ. ಬಾಲನ್ ತೀಯಾ ಸಮಾಜದ ಅಧ್ಯಕ್ಷ ಶ್ರೀಧರ್ ಕೆ.ಕೆ., ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ, ಸಂಪಾಜೆ ಪ್ರಾದೇಶಿಕ ಮಹಿಳಾ ಅಧ್ಯಕ್ಷೆ ಸಾವಿತ್ರಿ ಗೂನಡ್ಕ ಕೊರಗಪ್ಪ ಮಣಿಯಣಿ ಕೀಲಾರ್, ಕುಂಞಿಕಣ್ಣ ಕೈಪಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ವಿ.ವಿ. ಬಾಲನ್ ದೀಪಬೆಳಗಿಸಿ ಶುಭಹಾರೈಸಿದರು.
ಕುಂಹಿರಾಮ ಕೈಪಡ್ಕ ಮತ್ತು ಬಾಲ ಪ್ರತಿಭೆ ಸಮೃದ್ಧಿಯನ್ನು ಅಭಿನಂದಿಸಲಾಯಿತು. ಯಶ್ವಿತ ಗೂನಡ್ಕ ಪ್ರಾರ್ಥನೆಗೈದರು. ನಿಸ್ಮಿತಾ ಕೀಲಾರ್ ಸ್ವಾಗತಿಸಿ, ವಾರ್ಷಿಕ ವರದಿಯನ್ನು ಆಶಾ ಗೂನಡ್ಕ ಮತ್ತು ಲೆಕ್ಕಾಚಾರವನ್ನು ಚಂದ್ರನ್ ಕಡಪಾಲ ವಾಚಿಸಿದರು.


ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕುಂಹಿಕಣ್ಣ ಕೈಪಡ್ಕ, ಕಾರ್ಯದರ್ಶಿಯಾಗಿ ಆಶಾ ಗೂನಡ್ಕ, ಕೋಶಾಧಿಕಾರಿಯಾಗಿ
ನಿಸ್ಮಿತಾ ಕೀಲಾರ್, ಉಪಾಧ್ಯಕ್ಷರಾಗಿ ಭರತ್ ಕೊಯಿನಾಡ್, ಜತೆ ಕಾರ್ಯದರ್ಶಿಯಾಗಿ ನಿಶಾನ್ ದೊಡ್ಡಡ್ಕ ಆಯ್ಕೆಯಾದರು. ಆಶಾ ಬಿ. ಆರ್. ಕಾರ್ಯಕ್ರಮ ನಿರೂಪಿಸಿದರು. ಆಶಾ ಗೂನಡ್ಕ ವಂದರ್ಪಣೆಗೈದರು.