ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನೂತನ ವ್ಯವಸ್ಥಾಪನಾ ಸಮಿತಿ ರಚನೆ ಅಧ್ಯಕ್ಷರಾಗಿ ಎನ್.ಜಿ. ಲೋಕನಾಥ ರೈ ಎಣ್ಮೂರು

0

ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ನೂತನ ವ್ಯವಸ್ಥಾಪನಾ ಸಮಿತಿ ರಚನೆ ಅಧ್ಯಕ್ಷರಾಗಿ ಎನ್.ಜಿ. ಲೋಕನಾಥ ರೈ ಎಣ್ಮೂರು, ಸದಸ್ಯರಾಗಿ ವೇಣುಗೋಪಾಲ ರೈ ಕಲ್ಲೇರಿ, ಬಿಜಿಲ ಅಲೆಕ್ಕಾಡಿ, ಲೋಕೇಶ್ ಕೇರ್ಪಡ, ವಾಚಣ್ಣ ಗೌಡ ಹುದೇರಿ, ಪ್ರಮೋದ್ ಕುಮಾರ್ ರೈ ಕಲ್ಲೇರಿ, ಶ್ರೀಮತಿ ಕಸ್ತೂರಿ ಚಂದ್ರಶೇಖರ ಮೊಂಠಪಾದೆ, ಶ್ರೀಮತಿ ಗೌರಮ್ಮ ವೆಂಟ್ರಮಣ ಗೌಡ ನಾವೂರು ಆಯ್ಕೆಯಾದರು.


ದೇವಳದ ಆಡಳಿತ ಅಧಿಕಾರಿ ಸಿದ್ದಲಿಂಗ ಜಂಗಮ ಶೆಟ್ಟಿಯವರು ಸರಕಾರದ ಆದೇಶದಂತೆ ನೂತನ ಸಮಿತಿಗೆ ಅಧಿಕಾರದ ಕಡತ ನೀಡಿದರು, ಬಳಿಕ ಅಧ್ಯಕ್ಷರಾದ ಎನ್.ಜಿ. ಲೋಕನಾಥ ರೈಯವರು ಮಾತಾನಾಡಿ, ನಾನು ಅಧ್ಯಕ್ಷ ಮಾತ್ರ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ಶ್ರೀ ಕ್ಷೇತ್ರದ ಅಭಿವೃದ್ಧಿಯಲ್ಲಿ ಭಾಗಿಯಾಗೊಣ, ಎಲ್ಲರೂ ಸಮಾನರು ಎಂದು ಹೇಳಿದರು.


ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ರಾದ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ, ದೇವಸ್ಥಾನಕ್ಕೆ ಎಲ್ಲಾ ಪಕ್ಷದವರು ಬರುತ್ತಾರೆ. ಎಲ್ಲರನ್ನು ಒಂದೇ ರೀತಿ ಕಾಣಬೇಕು ರಾಜಕೀಯ ಸಲ್ಲದು. ಆರ್ಥಿಕ ವ್ಯವಸ್ಥೆ ಸರಿ ದೂಗಿಸಿ ಎಂದು ಹೇಳಿದರು.
ಪ್ರಸನ್ನ ಭಟ್ ಕೆ, ಎನ್ ಜಿ ಪ್ರಭಾಕರ ರೈ, ಶ್ರೀಮತಿ ಸರಸ್ವತಿ ಕಾಮತ್, ಮಾಯಿಲಪ್ಪ ಗೌಡ ಎಣ್ಮೂರು, ರಮೇಶ್ ಕೋಟೆ, ನಿವೃತ ಅಧ್ಯಾಪಕ ನಾರಾಯಣ ಭಟ್ ಕೆ., ರಾಜೇಂದ್ರ ಪ್ರಸಾದ್ ಶೆಟ್ಟಿ ಗುತ್ತು ಎಣ್ಮೂರು. ನ್ಯಾಯವಾಧಿ ಜಗದೀಶ್ ಹುದೇರಿ, ಭೂನೇಶ್ವರ ಪೂದೆ, ಸುಜಿತ್ ರೈ ಪಟ್ಟೆ, ಅರ್ಚಕ ಸದಸ್ಯ ಶ್ರೀ ಹರಿ ಕುಂಜೂರಾಯ ಮಾತನಾಡಿದರು.


ಈ ಸಂದರ್ಭದಲ್ಲಿ ಪೂದೆ ದೇವಸ್ಥಾನದ ವ್ಯವಸ್ಥಾನ ಸಮಿತಿ ಸದಸ್ಯರಾದ ವಿಜಯ ಲಕ್ಷ್ಮಿ ಪಾರ್ಲ, ಉದಯಕುಮಾರ್ ಕಾಯರ್ತಡ್ಕ, ಗಣೇಶ್ ಹುದೇರಿ, ಹರೀಶ್ ಕುಮಾರ್ ಹುದೇರಿ, ಹಾಗೂ ಪ್ರಕಾಶ್ ರೈ ಕುಲಾಯಿತೋಡಿ, ದಿವಾಕರ ನಾಗನಕಜೆ, ಉದಯ ಕುಮಾರ್ ಪಿ ಡಿ ಆರ್, ಲೋಕೇಶ್ ಶೇರ, ನಾರಾಯಣ ನಾಯ್ಕ್ ಎಂಜಿರ್, ದೀಪಕ್ ರೈ ಎಣ್ಮೂರು, ರಾಮಚಂದ್ರ ಪೂಜಾರಿ ನೂಜಾಡಿ, ಲಿಂಗಪ್ಪ ಗೌಡ ಕೇರ್ಪಡ, ಇತರರು ಉಪಸ್ಥಿತರಿದ್ದರು.
ವರದಿ : ಎ ಎಸ್ ಎಸ್ ಅಲೆಕ್ಕಾಡಿ