ವಾಲಿಬಾಲ್, ಹಗ್ಗಜಗ್ಗಾಟ ಸ್ಪರ್ಧೆ, ವೈಭವದ ಶೋಭಾಯಾತ್ರೆ
ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಳಲಂಬೆ, ಗುತ್ತಿಗಾರು ಇದರ ವತಿಯಿಂದ ೨೨ನೇ ವರ್ಷದ ಸಾರ್ವಜನಿಕ ಶ್ರೀ ಗಣೋಶೋತ್ಸವ ಆ. ೨೭ ಹಾಗೂ ಆ. ೨೮ ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ವಳಲಂಬೆ ಇಲ್ಲಿ ನಡೆಯಲಿದೆ.















ಆ. ೨೭ರಂದು ಬೆಳಿಗ್ಗೆ ಗಂಟೆ ೯.೦೦ಕ್ಕೆ ಗಣಪತಿ ಪ್ರತಿಷ್ಠೆ, ನಡೆಯಲಿದೆ. ಬಳಿಕ ಸಾಮೂಹಿಕ ಗಣಪತಿ ಹವನ ನಡೆಯಲಿದೆ. ಇದರೊಂದಿಗೆ ಪೂರ್ವಾಹ್ನ ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವುದು ಕಾರ್ಯಕ್ರಮ ಜರುಗಲಿದೆ. ಸ್ಪರ್ಧೆಗಳು ಜರುಗಲಿದ್ದು ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ ಹಾಗೂ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿ ಯರಿಗೆ, ಅಂಗನವಾಡಿ ಮತ್ತು ಎಲ್‌ಕೆಜಿ ಯುಕೆಜಿ ಮಕ್ಕಳಿಗೆ ಹಾಗೂ ೬೦ ವರ್ಷ ಮೇಲ್ಪಟ್ಟ ಮಹಿಳೆಯರಿಗೆ- ವಿವಿಧ ಸ್ಪರ್ಧೆಗಳು ಜರುಗಲಿದೆ. ಅದೇ ದಿನ ಪೂರ್ವಾಹ್ನ ಗಂಟೆ ೧೦.೦೦ರಿಂದ ಹಿಂದೂ ಬಾಂಧವರ ಮುಕ್ತ ವಾಲಿಬಾಲ್ ಪಂದ್ಯಾಟ ನಡೆಯಲಿದೆ.
ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮ ನಡೆದು ರಾತ್ರಿ ೭.೩೦ರಿಂದ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವಿನೋದಾವಳಿ ಗಳು ನಡೆದು, ರಾತ್ರಿ ಸಭಾ ಕಾರ್ಯಕ್ರಮ ಜರುಗಲಿದೆ. ಸಭೆಯಲ್ಲಿ ಪೂರ್ಣಾತ್ಮಾನಂದ ರಾಮ ಈಶ್ವರಮಂಗಲ ಇವರಿಂದ. ಧಾರ್ಮಿಕ ಉಪನ್ಯಾಸ ನಡೆಯಲಿದೆ. ಆ ಬಳಿಕ ಶ್ರೀ ನಂದನ ಕಲಾ ಕುಟುಂಬ ಮೆಟ್ಟಿನಡ್ಕ ಇವರ ಸಾರಥ್ಯದಲ್ಲಿ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ. ಅ.೨೭ರ ಸಂಜೆ ಪುರುಷರ, ಮಹಿಳೆಯರ ಹಗ್ಗಜಗ್ಗಾಟ ನಡೆಯಲಿದೆ.
ಆ. ೨೮ ರಂದು ಪೂರ್ವಾಹ್ನ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ಗಂಟೆ ೩.೩೦ರಿಂದ ಶ್ರೀ ದೇವರ ಮೂರ್ತಿಯ ಶೋಭಾಯಾತ್ರೆ ವೈಭವದಿಂದ ವಳಲಂಬೆಯಿಂದ ಗುತ್ತಿಗಾರಿಗೆ ತರಳಿ ಮರಳಿ ಬಂದು ವಳಲಂಬೆಯಲ್ಲಿ ಜಲಸ್ತಂಭನ ನಡೆಯ ಲಿದೆ.










