
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸುಬ್ರಹ್ಮಣ್ಯ ವತಿಯಿಂದ ೫೫ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.೨೭ ರಿಂದ ಸೆ.೨ ರ ವರಗೆ ನಡೆಯಲಿದೆ. ಇದರೊಂದಿಗೆ ಅತಿ ಮಹತ್ವದ ಕಾರ್ಯಕ್ರಮವೊಂದು ಜರುಗಲಿದ್ದು ಶ್ರೀ ಮಹಾಗಣಪತಿಗೆ ರಜತ ಪ್ರಭಾವಳಿ ಸಮರ್ಪಣೆ ನಡೆಯಲಿದೆ. ಆ.೨೭ರಂದು ಪೂ. ಗಂಟೆ ೮.೩೦ಕ್ಕೆ ಗಣಪತಿ ಪ್ರತಿಷ್ಠಾಪನೆ, ಪೂ.ಗಂಟೆ ೯.೩೦ ರಿಂದ ರಜತ ಪ್ರಭಾವಳಿ ಸಮರ್ಪಣಾ ಕಾರ್ಯಕ್ರಮ ಜರುಗಲಿದೆ.
ಬಳಿಕ, ೧೦೮ ತೆಂಗಿನ ಕಾಯಿ ಗಣಪತಿ ಹವನ, ಸ್ಪರ್ಧೆಗಳು, ಅಪರಾಹ್ನ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ಆ.೨೮, ೨೯, ೩೦ರಂದು ಅ.೨.೦೦ ಗಂಟೆಯಿಂದ ಪ್ರತಿದಿನ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನೆರವೇರಲಿದೆ. ಆ.೨೭ ಸಂಜೆ ೫ರಿಂದ ಭಜನೆ, ಬಳಿಕ ವಿದುಷಿ ಕು. ಮೇಧಾ ವಿದ್ಯಾಭೂಷಣ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಭಕ್ತಿ ಸಂಗೀತ ನಡೆದು ರಾತ್ರಿ ೮ರಿಂದ ಗಾನನೃತ್ಯ ಅಕಾಡೆಮಿ ಮಂಗಳೂರು ಮತ್ತು ಸುಳ್ಯದ ಕಲಾವಿದರಿಂದ ನೃತ್ಯ ಸಂಗಮ ಹಾಗೂ ನೃತ್ಯ ರೂಪಕ -ಶ್ರೀನಿವಾಸ ಕಲ್ಯಾಣ ನಡೆಯಲಿದೆ. ರಾತ್ರಿ ೯.೩೦ರಿಂದ ಗೀತ ನೃತ್ಯಾಲಯ ಧರ್ಮಸ್ಥಳ ಪ್ರಸ್ತುತಪಡಿಸುವ ವಿದುಷಿ ಶ್ರೀಮತಿ ಚೈತ್ರಾ ಭಟ್ ಮತ್ತು ತಂಡದವರಿಂದ ಸಮೂಹ ನೃತ್ಯ ನಡೆಯಲಿದೆ. ಆ.೨೮ರ ಪೂ.೧೦ರಿಂದ ಭಜನೆ, ಅಪರಾಹ್ನ ೪ರ ತೆಂಕು, ಬಡಗು ಯಕ್ಷ-ಗಾನ-ವೈಭವ ನಡೆಯಲಿದೆ. ಸಂಜೆ ೬.೦೦ ಕಲಾ ರತ್ನ ಶಂ.ನಾ.ಅಡಿಗ ಕುಂಬ್ಳೆ ಮತ್ತು ಬಳಗ ‘ಹರಿಕಥಾ ಸತ್ಸಂಗ’ ಭೂ ಕೈಲಾಸ ನಡೆದು ರಾತ್ರಿ ಗಂಟೆ ೮ರಿಂದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕುಮಾರ ವೈಭವ ನಡೆದು ರಾತ್ರಿ ೯ರಿಂದ ಕೆಎಸ್‌ಎಸ್ ಕಾಲೇಜು ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಜರುಗಲಿದೆ. ಆ.೨೯ ಸಂಜೆ ೫ರಿಂದ ಭಜನೆ, ೬ರಿಂದ ಶ್ರೀ ಆಶಿಕ್ ನಾಯಕ್ ಬೆಂಗಳೂರು ಕು. ಹಿತಾರ್ಥಿ ಬೆಂಗಳೂರು ಇವರಿಂದ ದಾಸರ ಪದಗಳು ಮತ್ತು ಸುಗಮ ಸಂಗೀತ ನಡೆಯಲಿದೆ.















ಆ.೩೦ ಸಂಜೆ ಭಜನೆ, ೬ರಿಂದ ಭಾರತೀಯ ಕಲೆಗಳ ತರಬೇತಿ ಕೇಂದ್ರ ನೃತ್ಯ ನಿನಾದ ಕಡಬದ ವಿದ್ಯಾರ್ಥಿಗಳಿಂದ ಭಾರತೀಯ ನೃತ್ಯ ಕಲಾ ವೈಭವ. ರಾತ್ರಿ ೭.೩೦ರಿಂದ ಹನುಮಗಿರಿ ಮೇಳ ಮತ್ತು ಇತರ ಮೇಳಗಳ ಆಯ್ದ ಕಲಾವಿದರಿಂದ ಶ್ರೀ ಕೃಷ್ಣ ಪಾರಿಜಾತ ನರಕಾಸುರ ವಧೆ ಯಕ್ಷಗಾನ ನಡೆಯಲಿದೆ. ಆ.೩೧ ರ ಸಂಜೆ ಭಜನೆ, ಸುಬ್ರಹ್ಮಣ್ಯ ಮತ್ತು ಕಲಾವಿದರಿಂದ ವಾದ್ಯ ಸಂಗೀತ ಮೇಳ, ನಡೆದು ರಾತ್ರಿ ೭ರಿಂದ ಎಸ್.ಎಸ್.ಪಿ.ಯು. ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಿಂದ ಜನಪದೀಯ ನೃತ್ಯ ಸಿಂಚನ ನಡೆದು ರಾತ್ರಿ ೮.೩೦ರಿಂದ ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಇದರ ಸುಬ್ರಹ್ಮಣ್ಯ ಶಾಖೆಯಿಂದ ನೃತ್ಯೋಹಂ ನಡೆಯಲಿದೆ. ಸೆ.೧ರ ಅ.೧ರಿಂದ ಅಕ್ಷರ ಗಾನಸುಧೆ ಸುಬ್ರಹ್ಮಣ್ಯ ಪ್ರಸ್ತುತ ಪಡಿಸುವ ಭಕ್ತಿ ಭಾವ ಗಾಯನ ನಡೆದು ಸಂಜೆ ೬.೦೦ ಕುಸಾಲ್ದ ಜವನೆರ್ ವಾಟ್ಸಪ್ ಗ್ರೂಪ್ ಸುಬ್ರಹ್ಮಣ್ಯ ಸಂಯೋಜನೆಯಲ್ಲಿ ಕುಸಲ ಗುರಿಕಾರೆ ದಿನೇಶ್ ಕೋಡಪದವು ಸಾರಥ್ಯದಲ್ಲಿ ಯಕ್ಷ ತೆಲಿಕೆ. ತೆಲಿಕೆದ ಬರ್ಸ ನಡೆಯಲಿದೆ.
ರಾತ್ರಿ ೮ರಿಂದ ಕಾಪಿಕಾಡ್, ಪಡೀಲ್, ವಾಮಂಜೂರ್, ಸಾಯಿಕೃಷ್ಣ ಅಭಿನಯದಲ್ಲಿ ಪುದರ್ ದೀತಿಜಿ ಹಾಸ್ಯಮಯ ತುಳು ನಾಟಕ ನಡೆಯಲಿದೆ. ಸೆ.೨- ಬೆ.೯.೩೦ರಿಂದ ಕೆ. ಯಜೇಶ್ ಆಚಾರ್ ಮತ್ತು ಬಳಗವರಿಂದ ಭಕ್ತಿ ಸಂಗೀತ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಅ. ಸರ್ವಾಲಂಕೃತ ರಥದಲ್ಲಿ ಶ್ರೀ ಮಹಾಗಣಪತಿ ಶೋಭಾಯಾತ್ರೆ ನಡೆಯಲಿದೆ.










