ಬೆಳ್ಳಾರೆಯಿಂದ ಕಳಂಜ ತನಕ ಮೆರವಣಿಗೆ
ಝಾರ್ಖಂಡ್ ರಾಂಚಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಗಳಿಸಿದ ಕಳಂಜ ಗ್ರಾಮದ ಕು|ಭವಿತಾ ಗೌಡ ಬೇರಿಕೆಯವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಮೆರವಣಿಗೆ ಮೂಲಕ ಆ.24ರಂದು ನಡೆಸಲಾಯಿತು.
















ಬೆಳ್ಳಾರೆ ಮೇಲಿನ ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ. ಜೇನು ಸೊಸೈಟಿಯ ಅಧ್ಯಕ್ಷರಾದ ಚಂದ್ರ ಕೋಲ್ಟಾರು, ಬೆಳ್ಳಾರೆ ಕಾಮಧೇನು ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪು, ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷರಾದ ಮಾಧವ ಗೌಡ ಕಾಮಧೇನು, ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾದ ಪದ್ಮನಾಭ ಬೀಡು, ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಬೇರಿಕೆ, ಉಪಾಧ್ಯಕ್ಷರಾದ ಪ್ರೇಮಲತಾ ಮಣಿಮಜಲು, ಮಾಜಿ ಸೈನಿಕರಾದ ರವೀಂದ್ರ ಗೌಡ ರಾಮಕುಮೇರಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷರಾದ ಎನ್ ವಿಶ್ವನಾಥ ರೈ ಕಳಂಜ, ಕಳಂಜ ಗ್ರಾಮ ಗೌಡ ಸಮಿತಿಯ ಅಧ್ಯಕ್ಷರಾದ ರುಕ್ಷ್ಮಯ್ಯ ಗೌಡ ಕಳಂಜ, ಕಾರ್ಯದರ್ಶಿ ಡಾ| ನಾರಾಯಣ ಶೇಡಿಕಜೆ, ಶ್ರೀನಾಥ್ ರೈ ದೋಳ್ಕೊಡಿ, ಉಮೇಶ್ ಕೆ.ಎಂ.ಬಿ, ಕಡಬ ತಾಲೂಕು ನಿವೃತ್ತ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ ಕಜೆಮೂಲೆ, ಸುಬ್ರಹ್ಮಣ್ಯ ಭಟ್ ಮುಂಡುಗಾರು, ಗಣೇಶ್ ಮುದ್ದಾಜೆ, ಅನಂತಕೃಷ್ಣ ತಂಟೆಪ್ಪಾಡಿ, ಈಶ್ವರ ಗೌಡ ಕಜೆಮೂಲೆ, ತಿಲಕ್ ತಂಟೆಪ್ಪಾಡಿ, ಪ್ರೀತಿಶ್ ತಂಟೆಪ್ಪಾಡಿ, ಲೋಹಿತ್ ಕಳಂಜ, ಶಿವಪ್ರಸಾದ್,
ಕು|ಭವಿತಾ ಗೌಡ ಬೇರಿಕೆಯವರ ತಂದೆ ಲಕ್ಷಣ ಗೌಡ ಬೇರಿಕೆ, ತಾಯಿ ಶ್ರೀಮತಿ ದಮಯಂತಿ ಬೇರಿಕೆ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಜಗದೀಶ್ ಮುಂಡುಗಾರು ಕಾರ್ಯಕ್ರಮ ನಿರ್ವಹಿಸಿದರು. ಅಭಿನಂದನಾ ಕಾರ್ಯಕ್ರಮದ ಬಳಿಕ ಬೆಳ್ಳಾರೆಯ ಅಚಲಾಪುರ ಕಟ್ಟೆಯಿಂದ ಕಳಂಜ ವಿಷ್ಣುನಗರದ ತನಕ ಮೆರವಣಿಗೆ ಜರುಗಿತು.










