ಕಾಂಗ್ರೆಸ್ ಕೃಷಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ : ವೆಂಕಪ್ಪ ಗೌಡ ಹೇಳಿಕೆಗೆ ವೆಂಕಟ್ ವಳಲಂಬೆ ಪ್ರತಿಕ್ರಿಯೆ

0

ಸುಳ್ಯದಲ್ಲಿ ನಿನ್ನೆ ಸಂಸದ ಕ್ಯಾ ಚೌಟರ ವಿಶೇಷ ಕಾಳಜಿ ಯಿಂದ ಕಾಫಿ ಬೆಳೆಯುವ ಬಗ್ಗೆ ರೈತರಿಗೆ ನಿನ್ನೆ ತಾಲೂಕಿನ ಕೃಷಿಕರ ಹಿತದೃಷ್ಟಿಯಿಂದ ಕಾಫಿಕೋ ಕಾರ್ಯಕ್ರಮ ಅಯೋಜಿಸಿದ್ದೆವು ಆದರೆ ಇಂತಹ ರೈತಪರ ವಿಚಾರದಲ್ಲಿ ಕಾಂಗ್ರೆಸ್ ಮುಖಂಡ ಎಂ ವೆಂಕಪ್ಪ ಗೌಡರು ಕ್ಷುಲ್ಲಕ ಹೇಳಿಕೆ ನೀಡಿರುವುದನ್ನು ಬಿಜೆಪಿ ಖಂಡಿಸುತ್ತದೆಯೆಂದು ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ಎರಡೂ ವರೆ ವರ್ಷಗಳಿಂದ ನಿಮ್ಮದೇ ಸರ್ಕಾರ ರಾಜ್ಯದಲ್ಲಿದ್ದು ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಏನು ಕ್ರಮ ಕೈಗೊಂಡಿದೆ ಮೊದಲು ಸ್ಪಷ್ಟಪಡಿಸಿ ಅಡಿಕೆ ಕೃಷಿಕರು ಹಳದಿ ರೋಗ,ಎಲೆ ಚುಕ್ಕಿ ರೋಗದಿಂದ ಕಷ್ಟಕ್ಕೆ ಸಿಲುಕಿದ್ದು ಈ ಹಿನ್ನೆಲೆಯಲ್ಲಿ ಕಾಫಿ ಕೃಷಿ ಬಗ್ಗೆ ತಾಲೂಕಿನ ಜನತೆ ಮಾಹಿತಿ ಕೊಡುವ ಕಾರ್ಯಕ್ರಮವಾಗಿದ್ದು ಅದೂ ಯಾವುದೇ ಪಕ್ಷದ ಕಾರ್ಯಕ್ರಮವಾಗಿರಲಿಲ್ಲ ಬಿಜೆಪಿ ಅಡಿಕೆ ಕೃಷಿಕರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದೆ ಆದರೆ ಕಾಂಗ್ರೆಸ್ ಪಕ್ಷ ಕೃಷಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು,ರೈತರ ಅಳಿವು ಉಳಿವಿನ ಪ್ರಶ್ನೆ ಬಂದಾಗ ರಾಜಕೀಯ ರೈತರಿಗೆ ಮಾಡಿದ ಅವಮಾನ. ಅಡಿಕೆ ಬೆಳೆಗಾರರು ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆಂದು ವೆಂಕಟ್ ವಳಲಂಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.